ಇವಿಎಂ ಮೇಲೆ ಸಾಕಷ್ಟು ಅನುಮಾನವಿದೆ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-05-22 12:12 GMT

ಮೈಸೂರು: ಇವಿಎಂ ಮೆಷಿನ್ ಗಳ ಮೇಲೆ ನನಗೆ ಸಾಕಷ್ಟು ಅನುಮಾನವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ನಗರದ ರಾಮಕೃಷ್ಣನಗರದಲ್ಲಿರುವ ನೃಪತುಂಗ ಕನ್ನಡ ಮಾಧ್ಯಮ ಕಾಲೇಜು ಕಟ್ಟಡದ ಉದ್ಘಾಟನೆ ನೆರವೇರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಿಜೆಪಿಯವರು ಇವಿಎಂ ಮೆಷಿನ್ ಗಳನ್ನು ಟ್ಯಾಂಪರ್ ಮಾಡುತ್ತಾರೆ. ಈ ಬಗ್ಗೆ ಸಾಕಷ್ಟು ಅನುಮಾನವಿದೆ. ಉಪಚುನಾವಣೆ ಗಳಲ್ಲಿ ಇವಿಎಂ ಟ್ಯಾಂಪರ್ ಆಗಲ್ಲ. ಸಾರ್ವತ್ರಿಕ ಚುನಾವಣೆಗಳಲ್ಲಿ ಮಾತ್ರ ಟ್ಯಾಂಪರ್ ಆಗುತ್ತದೆ. ಉಪ ಚುನಾವಣೆ ಗಳಲ್ಲಿ ನಮ್ಮ ಪರ ಮತ ಬರುತ್ತದೆ. ಸಾರ್ವತ್ರಿಕ ಚುನಾವಣೆಗಳಲ್ಲಿ ಏಕೆ ಬರುವುದಿಲ್ಲ ಎಂದು ಪ್ರಶ್ನಿಸಿದರು.

ರೋಷನ್ ಬೇಗ್ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಅಧಿಕಾರ ದಾಹದಿಂದ ರೋಷನ್ ಬೇಗ್ ಈ ರೀತಿ ಮಾತನಾಡಿದ್ದಾರೆ. ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು ಮತ್ತು ಲೋಕಸಭಾ ಟಿಕೆಟ್ ಕೂಡ ಸಿಗಲಿಲ್ಲ. ಹಾಗಾಗಿ ಇಂತಹ ಹೇಳಿಕೆ ನೀಡಿದ್ದಾರೆ. ಪಕ್ಷ ಇವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನಮ್ಮ ಪಕ್ಷದವರಲ್ಲ. ಅವರ ಹೇಳಿಕೆಗೆ ಬಹಿರಂಗವಾಗಿ ಉತ್ತರ ಕೊಡಲು ಸಾಧ್ಯವಿಲ್ಲ. ನಾನು ಸಮನ್ವಯ ಸಮಿತಿ ಅಧ್ಯಕ್ಷನಾಗಿರುವುದರಿಂದ ಪಕ್ಷದ ವೇದಿಕೆಯಲ್ಲೇ ಮಾತನಾಡುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News