ರೋಷನ್‌ ಬೇಗ್ ಬಿಜೆಪಿ, ಆರೆಸ್ಸೆಸ್ ಜತೆ ಕೈಜೋಡಿಸಿದ್ದಾರೆ: ಪರಿಷತ್ ಸದಸ್ಯ ರಿಝ್ವಾನ್ ಅರ್ಶದ್

Update: 2019-05-22 15:53 GMT
ರಿಝ್ವಾನ್ ಅರ್ಶದ್- ರೋಷನ್‌ ಬೇಗ್

ಬೆಂಗಳೂರು, ಮೇ 22: ಮಾಜಿ ಸಚಿವ ರೋಷನ್ ಬೇಗ್ ಅವರು ಬಿಜೆಪಿ ಕಡೆಗೆ ತೋರುತ್ತಿರುವ ಸ್ನೇಹ ಹೊಸದೇನಲ್ಲ. ಲೋಕಸಭೆ ಚುನಾವಣೆ ಸಂದರ್ಭದಲ್ಲೆ ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಜತೆ ಕೈಜೋಡಿಸಿದ್ದಾರೆಂದು ವಿಧಾನ ಪರಿಷತ್ ಸದಸ್ಯ, ಬೆಂ.ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಝ್ವಾನ್ ಅರ್ಶದ್ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ-ಆರೆಸ್ಸೆಸ್ ಜೊತೆ ಅವರ ಸಖ್ಯ ಲೋಕಸಭೆ ಚುನಾವಣೆಗೂ ಮೊದಲಿನಿಂದ ಇದೆ. ಅವರ ಪಕ್ಷ ವಿರೋಧಿ ಚಟುವಟಿಕೆಯ ಬಗ್ಗೆ ಈ ಹಿಂದೆಯೇ ಮುಖಂಡರ ಗಮನಕ್ಕೆ ತಂದಿದ್ದೇನೆ. ನನ್ನ ವಿರುದ್ಧದ ಅವರ ನಿಲುವಿನ ಹೊರತಾಗಿಯೂ ಕ್ಷೇತ್ರದ ಪಕ್ಷದ ಕಾರ್ಯಕರ್ತರು ನನ್ನ ವಿಜಯಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ.

ಶಿವಾಜಿನಗರ ಕ್ಷೇತ್ರದಲ್ಲಿ ನನ್ನ ಪರವಾಗಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಕೇಂದ್ರ ಕ್ಷೇತ್ರದಲ್ಲಿ ನಾನು ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸವಿದೆ ಎಂದಿರುವ ಅವರು, ರೋಷನ್ ಬೇಗ್ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಿಝ್ವಾನ್ ಅರ್ಶದ್ ಕೆಪಿಸಿಸಿ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News