ಎಸೆಸೆಲ್ಸಿ ಪರೀಕ್ಷಾ ಶುಲ್ಕ ಪಾವತಿ ಅವಧಿ ವಿಸ್ತರಣೆ

Update: 2019-05-22 16:46 GMT

ಬೆಂಗಳೂರು, ಮೇ 22: ಎಸೆಸೆಲ್ಸಿ ಪೂರಕ ಪರೀಕ್ಷೆಯ ಪುನರಾವರ್ತಿತ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ ಪಾವತಿ ದಿನಾಂಕವನ್ನು ಮೇ 25 ರವರೆಗೆ ವಿಸ್ತರಣೆ ಮಾಡಲಾಗಿದೆ.

ಶುಲ್ಕು ಪಾವತಿ ದಿನಾಂಕ ವಿಸ್ತರಣೆ ಸಂಬಂಧ ಕೋರಿಕೆಗಳು ಬಂದ ಹಿನ್ನೆಲೆಯಲ್ಲಿ ಪ್ರತಿ ಅಭ್ಯರ್ಥಿಗೆ 500 ರೂ.ಗಳ ದಂಡ ಶುಲ್ಕದೊಂದಿಗೆ ಆನ್‌ಲೈನ್‌ನಲ್ಲಿ ಅಭ್ಯರ್ಥಿಗಳು ವಿವರ ಅಪ್‌ಲೋಡ್ ಮಾಡಲು ಮೇ 25 ರವರೆಗೆ ಕಾಲಾವಕಾಶ ನೀಡಲಾಗಿದೆ.

ಮೇ 21 ರಿಂದ ಮೇ 25 ರವರೆಗೆ ಅನ್‌ಲೈನ್‌ನಲ್ಲಿ ಅಭ್ಯರ್ಥಿಗಳ ವಿವರಗಳನ್ನು ಅಪ್‌ಲೋಡ್ ಮಾಡಿದ ಪ್ರಕರಣಗಳ ಶುಲ್ಕವನ್ನು ಈ ಹಿಂದಿನ ಸಾಲಿನಂತೆ ಮಂಡಳಿಯ ಎನ್‌ಇಎಫ್‌ಟಿ ಚಲನ್ ಮೂಲಕ ಬ್ಯಾಂಕಿಗೆ ಪಾವತಿಸಲು ಕೊನೆಯ ಮೇ 27 ಆಗಿದೆ. ಚಲನ್ ಮೂಲಕ ಪರೀಕ್ಷಾ ಶುಲ್ಕವನ್ನು ಬ್ಯಾಂಕ್‌ಗೆ ಪಾವತಿಸಿದ ಬ್ಯಾಂಕ್‌ನ ಮೂಲ ಚಲನ್ ಪ್ರತಿ ಮತ್ತು ಇತರೆ ದಾಖಲೆಗಳನ್ನು ಮೇ 28 ರೊಳಗೆ ಮಂಡಳಿಗೆ ತಲುಪಿಸಬೇಕು.

ಮೇ 16 ರಿಂದ ಮೇ 25 ರವರೆಗೆ ಅನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ವಿವರಗಳನ್ನು ಅಪ್‌ಲೋಡ್ ಮಾಡಿದ ಪ್ರಕರಣಗಳಿಗೆ ಆನ್‌ಲೈನ್‌ನಲ್ಲಿ ಬ್ಯಾಂಕ್ ಚಲನ್ ಜನರೇಟ್ ಆಗುವುದಿಲ್ಲ. ಬದಲಿಗೆ ಸದರಿ ದಂಡಶುಲ್ಕ ಮತ್ತು ಪರೀಕ್ಷಾ ಶುಲ್ಕವನ್ನು ಈ ಹಿಂದಿನ ಸಾಲಿನಂತೆ ಮಂಡಳಿಯ ಎನ್‌ಇಎಫ್‌ಟಿ ಚಲನ್‌ನಲ್ಲಿ ಭರ್ತಿ ಮಾಡಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಜಮೆ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News