ಪಾಲಿಕೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಕೋಲಾರ ಸಂಸದ ಮುನಿಸ್ವಾಮಿ

Update: 2019-05-24 15:14 GMT

ಬೆಂಗಳೂರು, ಮೇ 24: ಕೋಲಾರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲಿಲ್ಲದ ಸರಕಾರ ಕೆ.ಎಚ್.ಮುನಿಯಪ್ಪ ವಿರುದ್ಧ ಗೆದ್ದಿರುವ ಬಿಬಿಎಂಪಿ ಕಾಡುಗೋಡಿ ಸದಸ್ಯ ಮುನಿಸ್ವಾಮಿ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

ಬಿಬಿಎಂಪಿ ಸದಸ್ಯರು ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಅಷ್ಟೇ ಪಾಲಿಕೆ ಸದಸ್ಯರಾಗಿ ಮುಂದುವರಿಯಲು ಅವಕಾಶವಿರುತ್ತದೆ. ಆದರೆ, ಸಂಸದರಾಗಿ ಆಯ್ಕೆಯಾದವರು ಸದಸ್ಯರಾಗಿರಲು ಆಗುವುದಿಲ್ಲ. ಕಾನೂನಿನಲ್ಲಿಯೂ ಅದಕ್ಕೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕಿದೆ.

ಮುನಿರತ್ನ, ನರೇಂದ್ರ ಬಾಬು, ಭೈರತಿ ಬಸವರಾಜು, ಕೆ.ಚಂದ್ರಶೇಖರ್ ಪಾಲಿಕೆ ಸದಸ್ಯರಾಗಿದ್ದುಕೊಂಡೇ ಶಾಸಕರಾಗಿ ಆಯ್ಕೆಯಾಗಿದ್ದರು. ಇತ್ತೀಚಿಗೆ ಬಸವನಪುರ ವಾರ್ಡ್‌ನ ಬಿಜೆಪಿ ಸದಸ್ಯೆಯಾಗಿದ್ದ ಪೂರ್ಣಿಮಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದು, ಪಾಲಿಕೆ ಸದಸ್ಯ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ, ಸಂಸದರಾಗಿ ಇದುವರೆಗೂ ಯಾವುದೇ ಪಾಲಿಕೆ ಸದಸ್ಯರು ಆಯ್ಕೆಯಾಗಿಲ್ಲ.

ಸಂಸದರಾಗಿದ್ದುಕೊಂಡೇ ಪಾಲಿಕೆ ಸದಸ್ಯರಾಗಿರಲು ಅವಕಾಶ ಇದೆ ಅಥವಾ ಇಲ್ಲ ಎಂಬುದರ ಕುರಿತು ಸ್ಪಷ್ಟತೆ ಸಿಕ್ಕಿದ್ದು, ಕಾನೂನಿನ ಪ್ರಕಾರ ಅವರಿಗೆ ಅವಕಾಶವಿಲ್ಲ. ಹೀಗಾಗಿ, ಅವರು ರಾಜೀನಾಮೆ ನೀಡಲಿದ್ದು, ಇಲ್ಲಿ ಉಪ ಚುನಾವಣೆ ನಡೆಸುವ ಕುರಿತು ಚುನಾವಣಾ ಆಯೋಗ ನಿರ್ಧರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News