×
Ad

ಸ್ಥಳೀಯ ಸಂಸ್ಥೆಗಳ ಚುನಾವಣೆ: ರಾಜ್ಯದಾದ್ಯಂತ 4360 ಅಭ್ಯರ್ಥಿಗಳು ಕಣದಲ್ಲಿ

Update: 2019-05-25 20:40 IST

ಬೆಂಗಳೂರು, ಮೇ 25: ಲೋಕಸಮರ ಪೂರ್ತಿಯಾದ ಬಳಿಕ ಇದೀಗ ರಾಜ್ಯದ 61 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಕಣದಲ್ಲಿ ಸುಮಾರು 4360 ಅಭ್ಯರ್ಥಿಗಳಿದ್ದಾರೆ.

ರಾಜ್ಯದ 61 ನಗರ ಸ್ಥಳೀಯ ಸಂಸ್ಥೆಗಳ 1326 ಪುರಸಭೆ, ನಗರಸಭೆ, ಪಟ್ಟಣಪಂಚಾಯತ್ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಮೇ 29 ರಂದು ಚುನಾವಣೆ ನಡೆಯಲಿದೆ. ಈಗಾಗಲೇ ವಿವಿಧ ಕಡೆಗಳಲ್ಲಿ ಸುಮಾರು 30 ವಾರ್ಡ್‌ಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 1296 ವಾರ್ಡ್‌ಗಳಿಗೆ ಮತದಾನ ನಡೆಯಲಿದ್ದು, 4360 ಅಭ್ಯರ್ಥಿಗಳು ಪರಸ್ಪರ ಸೆಣಸಲಿದ್ದಾರೆ.

ಕಾಂಗ್ರೆಸ್-1224, ಬಿಜೆಪಿ 1125, ಜೆಡಿಎಸ್ 780, ಸಿಪಿಎಂ 25, ಬಿಎಸ್ಪಿ 103 ಹಾಗೂ ಪಕ್ಷೇತರರು 1056 ವಾರ್ಡ್‌ಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಬಿಎಂಪಿ ಎರಡು ವಾರ್ಡ್, ಹೆಬ್ಬಗೋಡಿ ಪುರಸಭೆಯ ಒಂದು ವಾರ್ಡ್, ತುಮಕೂರು ಮಹಾನಗರ ಪಾಲಿಕೆಯ ಒಂದು ವಾರ್ಡ್, ಬೆಳಗಾವಿ ಜಿಲ್ಲೆಯ ಸದಗಲ ಹಾಗೂ ಮುಗಳಖೋಡ ಪುರಸಭೆಗಳ ತಲಾ ಒಂದು ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 32 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News