ದ್ವೇಷ, ವೈಷಮ್ಯ ಬಿಟ್ಟುಬಿಡಿ: ಜನತೆಗೆ ಸುಮಲತಾ ಮನವಿ

Update: 2019-05-25 17:46 GMT

ಮಂಡ್ಯ, ಮೇ 25: ನನ್ನ ಎಲ್ಲಾ ಪ್ರೀತಿಯ ಮಂಡ್ಯ ಬಂಧುಗಳೇ…ಚುನಾವಣೆ ಮುಗಿದಿದೆ. ಚುನಾವಣೆಯ ಸಂದರ್ಭದಲ್ಲಿ ಗೆಲುವಿನ ಪ್ರತಿಷ್ಠೆಗಳು ಪರಸ್ಪರ ವೈಷಮ್ಯ ಸಹಜವಾಗಿ ಉಂಟಾಗುತ್ತದೆ. ಆದರೆ, ನಾವೆಲ್ಲರೂ ಒಂದೇ ಊರಿನಲ್ಲಿ ಬದುಕುತ್ತಿರುವವರು, ಪರಸ್ಪರ ಹೊಂದಾಣಿಕೆಯ ಜೀವನ ನಡೆಸುತ್ತಿರುವವರು. ಚುನಾವಣೆಯ ದ್ವೇಷಗಳನ್ನು ವೈಷಮ್ಯಗಳನ್ನು ಚುನಾವಣೆಗೆ ಬಿಟ್ಟುಬಿಡಬೇಕು…ಎಂದು ನೂತನ ಸಂಸದೆ ಸುಮಲತಾ ಅಂಬರೀಷ್ ತನ್ನ ಫೇಸ್‍ಬುಕ್ ಖಾತೆಯಲ್ಲಿ ಮನವಿ ಮಾಡಿದ್ದಾರೆ.

ಚುನಾವಣೆ ಮುಗಿದು ಫಲಿತಾಂಶ ಬಂದ ನಂತರವೂ ದ್ವೇಷವನ್ನು ಮುಂದುವರಿಸಬಾರದು. ಒಂದೇ ಕುಟುಂಬದಂತೆ ನಾವೆಲ್ಲರೂ ಬದುಕಬೇಕಾಗಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಇವೆಲ್ಲವೂ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಚುನಾವಣೆಯ ನಂತರ ನಮ್ಮ ಊರು, ನಮ್ಮ ಸಮಸ್ಯೆಗಳ ವಿಚಾರದಲ್ಲಿ ಸಾಮೂಹಿಕವಾಗಿ ಚರ್ಚಿಸಬೇಕು ಹಾಗೂ ಚಿಂತಿಸಬೇಕು ಎಂದು ಅವರು ಹೇಳಿದ್ದಾರೆ.

ಮಂಡ್ಯದ ಜನತೆಯಾದ ನಾವೆಲ್ಲರೂ ಒಂದೇ ಕುಟುಂಬದಂತೆ ಬದುಕೋಣ. ರಾಜಕೀಯ ಕಿತ್ತಾಟಗಳನ್ನು ದಯವಿಟ್ಟು ಯಾರೂ ಮಾಡಬೇಡಿ. ಇದು ನನ್ನ ಜನತೆಯಲ್ಲಿ ಪ್ರೀತಿಯ ಮನವಿ ಎಂದೂ ಅವರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News