×
Ad

ಕೊಲೆ ಪ್ರಕರಣ: ವ್ಯಕ್ತಿಗೆ ಜೀವಾವಧಿ ಶಿಕ್ಷೆ

Update: 2019-05-26 17:40 IST

ದಾವಣಗೆರೆ, ಮೇ 26: ಮಾಯಕೊಂಡ ಹೋಬಳಿಯ ಬೊಮ್ಮೆನಹಳ್ಳಿಯಲ್ಲಿ 2 ವರ್ಷಗಳ ಹಿಂದೆ ವೈಯಕ್ತಿಕ ಕಾರಣದಿಂದ ಅಕ್ಕನನ್ನು ಕೊಂದ ಆರೋಪಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 30 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. 

ಬೊಮ್ಮೆನಹಳ್ಳಿ ಗಣೇಶ್ ನಾಯ್ಕ್ ಶಿಕ್ಷೆಗೆ ಒಳಗಾದವ. ಈತ ತನ್ನ ಅಕ್ಕ ಶಾಂತಿ ಬಾಯಿ ಕಮಲಾನಾಯ್ಕ್ ಅವರ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ. ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News