×
Ad

ಎಸೆಸೆಲ್ಸಿ ಮರು ಮೌಲ್ಯಮಾಪನ: ವಿಜಯಪುರದ ವಿದ್ಯಾರ್ಥಿನಿ ಸುಪ್ರಿಯಾ ರಾಜ್ಯಕ್ಕೆ ಪ್ರಥಮ

Update: 2019-05-26 20:30 IST

ಬೆಂಗಳೂರು, ಮೇ 26: ಎಸೆಸೆಲ್ಸಿ ಮರು ಮೌಲ್ಯಮಾಪನ ಪರೀಕ್ಷೆ ಪ್ರಕಟಗೊಂಡಿದ್ದು, ವಿಜಯಪುರ ಜಿಲ್ಲೆಯ ಸುಪ್ರಿಯಾ ಜೋಶಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಎ.30 ರಂದು ಪ್ರಕಟವಾದ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಗಣಿತ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ತಲಾ 6 ಅಂಕಗಳು ಕಡಿಮೆ ಬಂದಿದ್ದವು. ಆದುದರಿಂದಾಗಿ ಶಿಕ್ಷಕರು ಹಾಗೂ ಪೋಷಕರ ಸಲಹೆ ಮೇರೆಗೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು.

ಮರುಮೌಲ್ಯಮಾಪನದ ಬಳಿಕ ಪ್ರಕಟವಾದ ಫಲಿತಾಂಶದಲ್ಲಿ ಸುಪ್ರಿಯಾಗೆ 625 ಕ್ಕೆ 625 ಅಂಕಗಳು ಪಡೆದುಕೊಂಡಿದ್ದು, ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಇದರಿಂದಾಗಿ ಅವರ ಸಂತಸ ಇಮ್ಮಡಿಗೊಂಡಿತ್ತು. ಜಿಲ್ಲೆಯ ಡಿಡಿಪಿಐ ಪ್ರಸನ್ನ ಕುಮಾರ ಮತ್ತು ಆರ್.ಎನ್.ಹುರಳಿ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ, ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ಮೊದಲ ಫಲಿತಾಂಶದಲ್ಲಿ ಬೆಂಗಳೂರು ದಕ್ಷಿಣದ ಡಿ. ಸೃಜನಾ ಮತ್ತು ಉತ್ತರ ಕನ್ನಡ ಜಿಲ್ಲೆಯ ನಾಗಾಂಜಲಿ ಪರಮೇಶ್ವರ್ ನಾಯ್ಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಇದೀಗ ಅವರ ಸಾಲಿಗೆ ಸುಪ್ರಿಯಾನೂ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News