×
Ad

ನೂತನ ಶಾಸಕರಾಗಿ ಡಾ.ಅವಿನಾಶ್ ಜಾಧವ್ ಪ್ರಮಾಣ ವಚನ ಸ್ವೀಕಾರ

Update: 2019-05-27 22:15 IST

ಬೆಂಗಳೂರು, ಮೇ 27: ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಉಪ ಉಚನಾವಣೆಯಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ಡಾ. ಅವಿನಾಶ್ ಜಾಧವ್ ಅವರು ಪ್ರಮಾಣ ವಚನ ಸ್ವೀಕರಿಸಿದರು.

ಸೋಮವಾರ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಅವರ ಕೊಠಡಿಯಲ್ಲಿ ನೂತನ ಶಾಸಕರಾಗಿ ಅವಿನಾಶ್ ಜಾಧವ್ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ಮಾಲಿಕಯ್ಯ ಗುತ್ತೇದಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಮದುವೆ ಮಾಡಿಸಬೇಕು: ಪುತ್ರ ಡಾ.ಅವಿನಾಶ್ ಜಾಧವ್ ಪ್ರಯಾಣ ವಚನ ಸ್ವೀಕಾರ ಕಾರ್ಯಕ್ರಮ ನಿಮಿತ್ತ ವಿಧಾನಸೌಧಕ್ಕೆ ಸಂಸದ ಡಾ.ಉಮೇಶ್ ಜಾಧವ್ ಆಗಮಿಸುತ್ತಿದ್ದ ವೇಳೆ ಡಿಸಿಎಂ ಡಾ.ಜಿ.ಪರಮೇಶ್ವರ್ ಮುಖಾಮುಖಿಯಾದರು. ಈ ವೇಳೆ ಜಾಧವ್ ಜತೆಗಿದ್ದ ಮಾಜಿ ಸಚಿವ ಚಿಂಚನಸೂರ್, ಪರಮೇಶ್ವರ್ ಅವರಿಗೆ ಎರಡನೆ ಮದುವೆ ಮಾಡಿಸಬೇಕೆಂದು ಕಾಲೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News