ತಮಿಳುನಾಡಿನಲ್ಲಿ ಮೋದಿ ವಿರೋಧಿ ಅಲೆಯಿದೆ: ರಜನಿಕಾಂತ್

Update: 2019-05-28 15:00 GMT

ಚೆನ್ನೈ, ಮೇ 28: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಸೋಲು ಅನುಭವಿಸಲು ಇಲ್ಲಿನ ಮೋದಿ ವಿರೋಧಿ ಅಲೆ ಕಾರಣ ಎಂದು ನಟ ರಜನಿಕಾಂತ್ ಮಂಗಳವಾರ ಹೇಳಿದ್ದಾರೆ.

ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಮೋದಿ ಅಲೆ ಇದೆ ಎಂದು ಅವರು ಹೇಳಿದ್ದಾರೆ. ‘‘ತಮಿಳುನಾಡಿನಲ್ಲಿ ಮೋದಿ ವಿರೋಧಿ ಅಲೆ ಇದೆ. ಒಂದು ಬಾರಿ ರಾಜಕೀಯ ಅಲೆ ಹುಟ್ಟಿಕೊಂಡರೆ, ಅದರಲ್ಲಿ ಸಾಗುವವರು ಜಯ ಗಳಿಸುತ್ತಾರೆ’’ ಎಂದು ಅವರು ಹೇಳಿದರು. ತಮಿಳುನಾಡಿನಲ್ಲಿ ಹೈಡ್ರೋಕಾರ್ಬನ್ ಬೇರ್ಪಡಿಸುವಿಕೆ, ನೀಟ್ ನಂತಹ ವಿಚಾರಗಳು, ಪ್ರತಿಪಕ್ಷಗಳ ಅಬ್ಬರದ ಪ್ರಚಾರ ಬಿಜೆಪಿ ಸೋಲಿಗೆ ಕಾರಣವಾಯಿತು ಎಂದು ಅವರು ಅಭಿಪ್ರಾಯಪಟ್ಟರು.

 ಭಾರತದಲ್ಲಿ ನೆಹರೂ ಹಾಗೂ ಇಂದಿರಾಗಾಂಧಿ ಬಳಿಕದ ವರ್ಚಸ್ವಿ ನಾಯಕರು ರಾಜೀವ್ ಗಾಂಧಿ ಹಾಗೂ ವಾಜಪೇಯಿ. ತಮಿಳುನಾಡಿನಲ್ಲಿ ಕಾಮರಾಜ್ ವರ್ಚಸ್ವಿ ನಾಯಕರು. ಬಿಜೆಪಿಯ ಜಯ ಮೋದಿ ನಾಯಕತ್ವದ ಜಯ ಎಂದು ರಜನಿಕಾಂತ್ ಅವರು ತನ್ನ ನಿವಾಸದ ಹೊರಗಡೆ ಸುದ್ದಿಗಾರರಿಗೆ ತಿಳಿಸಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜೀನಾಮೆ ಬಗ್ಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ರಾಜೀನಾಮೆ ನೀಡಬಾರದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News