ಕೊಳ್ಳೇಗಾಲ: ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ; ನೆಲಕ್ಕುರುಳಿದ ಮರಗಳು

Update: 2019-05-29 12:39 GMT

ಕೊಳ್ಳೇಗಾಲ,ಮೇ 29: ಪಟ್ಟಣದಲ್ಲಿ ಮಂಗಳವಾರ ರಾತ್ರಿ ಗುಡುಗು ಸಿಡಿಲು ಸಹಿತ ಧಾರಕಾರ ಮಳೆಯಾಗಿದ್ದು, ಹಲವಾರು ಕಡೆಗಳಲ್ಲಿ ಮರಗಳು ಉರುಳಿದ ಘಟನೆ ಪಟ್ಟಣದ ವ್ಯಾಪ್ತಿಯಲ್ಲಿ ನಡೆದಿದೆ.

ಮೊದಲಿಗೆ ಬಿರುಗಾಳಿಯಿಂದ ರಸ್ತೆಯಿಡೀ ಧೂಳು ತುಂಬಿತ್ತು. ನಂತರ ಗಾಳಿ ಕಡಿಮೆಯಾಗುತ್ತಿದಂತೆ ಮಳೆ ಆರ್ಭಟ ಹೆಚ್ಚಾಯಿತು.
ಮಳೆ ಆರಂಭವಾಗುತ್ತಿದ್ದಂತೆಯೆ ವಿದ್ಯುತ್ ಕಡಿತಗೊಳಿಸಲಾಯಿತು. ಇಡೀ ರಾತ್ರಿ ಕರೆಂಟ್ ಇಲ್ಲದೆ ಜನರು ಪರದಾಡುವಂತಾಯಿತು. ಪಟ್ಟಣದ ವ್ಯಟನರಿ ಆಸ್ವತ್ರೆ ಹಾಗೂ ಎಸ್.ವಿ.ಕೆ ಕಾಲೇಜಿನ ಕಂಪೌಂಡ್ ಪಕ್ಕದಲ್ಲಿರುವ ಉಪನೋಂದಣಿ ಕಚೇರಿಯ ಇಂಟರ್‍ನೆಟ್ ಟವರ್ ಕಚೇರಿಯ ಮೇಲೆ ಭಾರೀ ಗಾತ್ರದ ಕೊಂಬೆ ಬಿದ್ದಿದೆ.

ಅಲ್ಲಲ್ಲಿ ಸಣ್ಣಪುಟ್ಟ ಮರಗಳು ಸೇರಿದಂತೆ ಮರದ ಕೊಂಬೆಗಳು ಬಿದ್ದಿದೆ. ಇನ್ನುಳಿದಂತೆ ಯಾವುದೇ ರೀತಿಯಲ್ಲಿ ಜನರಿಗೆ ತೊಂದರೆ ಮತ್ತು ಪ್ರಾಣಾಪಾಯ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News