×
Ad

ಮಾಜಿ ಶಾಸಕ ಸಿ.ಎಸ್.ಮುತ್ತಿನಪೆಂಡಿಮಠ ನಿಧನ

Update: 2019-05-29 21:56 IST

ಬೆಂಗಳೂರು, ಮೇ 29: ಗದಗ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಚನ್ನವೀರಯ್ಯ ಶಾಂತಯ್ಯ ಮುತ್ತಿನಪೆಂಡಿಮಠ(90) ನಗರದಲ್ಲಿ ಬುಧವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ.

1978ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುತ್ತಿನಪೆಂಡಿಮಠ ಕಾಂಗ್ರೆಸ್‌ನ ಕೆ.ಎಚ್.ಪಾಟೀಲರನ್ನು ಸೋಲಿಸಿದ್ದರು. 1983ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. 1989ರಲ್ಲಿ ಜನತಾದಳದಿಂದ ಕಣಕ್ಕಿಳಿದು ಕೆ.ಎಚ್.ಪಾಟೀಲ ವಿರುದ್ಧ ಹಾಗೂ 1999ರಲ್ಲಿ ಡಿ.ಆರ್.ಪಾಟೀಲ ವಿರುದ್ಧ ಸೋಲು ಅನುಭವಿಸಿದ್ದರು. 1974ರಲ್ಲಿ ಕರ್ನಾಟಕ ವಿವಿಯಿಂದ ಸೆನೆಟ್ ಸದಸ್ಯರಾಗಿದ್ದರು. ಗದಗ ನಗರಕ್ಕೆ ತುಂಗಭದ್ರಾ ನದಿಮೂಲದಿಂದ ನೀರು ಪೂರೈಸಲು ಮೊದಲ ಹಂತದ ಕುಡಿಯುವ ನೀರಿನ ಯೋಜನೆ, ಇವರು ಶಾಸಕರಾಗಿದ್ದ ಅವಧಿಯಲ್ಲಿ ಜಾರಿಯಾಗಿತ್ತು. ಅಂತ್ಯಕ್ರಿಯೆ ಗುರುವಾರ ಗದಗಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News