ಮೈಸೂರು: ಶಾಂತಿಯುತವಾಗಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ

Update: 2019-05-29 17:34 GMT

ಮೈಸೂರು,ಮೇ.29: ಮೈಸೂರು ಜಿಲ್ಲೆಯ ನಂಜನಗೂಡು ಕೆ.ಆರ್.ನಗರ ಮತ್ತು ಬನ್ನೂರು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದೆ. ನಂಜನಗೂಡು ನಗರಸಭೆಗೆ ಶೇ.66.80. ಕೆ.ಆರ್.ನಗರ ಪುರಸಭೆಗೆ ಶೇ.70.84 ಮತ್ತು ಬನ್ನೂರು ಪುರಸಭೆಗೆ ಶೇ.79.28 ಮತದಾನವಾಗಿದೆ.

ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನಂಜನಗೂಡಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಿರ್ಮಾಣ ಮಾಡಿರುವ ಸ್ಟ್ರಾಂಗ್ ರೂಂಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಂಜನಗೂಡು ನಗರಭೆಗೆ ಘಟಾನುಘಟಿಗಳು ಸ್ಪರ್ಧೆ ಮಾಡಿದ್ದು, ಪ್ರಮುಖವಾಗಿ ನಗರಸಭಾಧ್ಯಕ್ಷೆ ಪುಷ್ಪ ಕಮಲೇಶ್, ನಗರಸಭೆ ಉಪಾಧ್ಯಕ್ಷ ಪ್ರದೀಪ್, ಮಾಜಿ ಪುರಸಭಾಧ್ಯಕ್ಷ ಶ್ರೀಧರ್, ನಗರಸಭಾ ಸದಸ್ಯರುಗಳಾದ ಎನ್.ರಾಜು, ಗಿರೀಶ್, ಮಹದೇವಸ್ವಾಮಿ ಸೇರಿದಂತೆ ಹಲವರು ಕಣದಲ್ಲಿದ್ದಾರೆ.

23ನೇ ವಾರ್ಡ್‍ನ ಪಕ್ಷೇತರ ಅಭ್ಯರ್ಥಿ ಎನ್.ಎಸ್.ಯೋಗೀಶ್ ಬುಧವಾರ ಬೆಳಗ್ಗೆ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ತಮ್ಮ ತಾಯಿಯ ನೆನೆದು, ದೇವರ ಆಶೀರ್ವಾದ ಪಡೆದು ಮತದಾನ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News