ಹನೂರು ಪ.ಪಂ. ಚುನಾವಣೆ: ಶೇ 80.13 ರಷ್ಟು ಮತದಾನ

Update: 2019-05-29 17:59 GMT

ಹನೂರು, ಮೇ 29: ಹನೂರು ಪಟ್ಟಣ ಪಂಚಾಯತ್ ಗೆ ಬುಧವಾರ ನಡೆದ ಚುನಾವಣೆಯ ಪ್ರಕ್ರಿಯೆಯೂ ಶಾಂತಿಯುತವಾಗಿ ಪೂರ್ಣಗೊಂಡು ಶೇ80.13 ರಷ್ಟು ಮತದಾನವಾಗಿದೆ. 13 ವಾರ್ಡ್‍ಗಳಿಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮ್‍ನಲ್ಲಿ ಭದ್ರವಾಗಿದೆ.

ಮತದಾರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು. ತಾಂತ್ರಿಕವಾಗಿ ಎಲ್ಲಿಯೂ ಮತಯಂತ್ರಗಳಲ್ಲಿ ದೋಷ ಕಂಡುಬಂದಿಲ್ಲ. ಯಾವುದೇ ವಾರ್ಡ್‍ಗಳಲ್ಲಿಯೂ ಗೊಂದಲ ಸೃಷ್ಟಿಯಾಗಿಲ್ಲ. ಬಹುತೇಕ ಎಲ್ಲಾ ಕಡೆಗಳಲ್ಲಿಯೂ ಶಾಂತಿಯುತವಾಗಿ ಮತದಾನ ಪೂರ್ಣಗೊಂಡಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಎಲ್ಲಾ ವಾರ್ಡ್‍ಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿತ್ತು. ಹಲವು ಮತದಾನ ಕೇಂದ್ರಗಳಿಗೆ ಮುಖ್ಯ ಚುನಾವಣಾಧಿಕಾರಿ ಸ್ವಾಮಿ, ಉಪಚುನಾವಣಾಧಿಕಾರಿ ಹೆಚ್.ಕ್ಯಾತ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿದರು.

ಮೇ 31ಕ್ಕೆ ಮತ ಎಣಿಕೆ: ಚುನಾವಣಾ ಆಯೋಗವು ಮೇ 31 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಏಣಿಕೆ ಮಾಡಲು ಸಿದ್ದತೆಯನ್ನು ಮಾಡಿಕೊಂಡಿದೆ.

ಸೀರೆಗಳ ವಶ: ಮಂಗಳವಾರ ರಾತ್ರಿ 1 ವಾರ್ಡ್‍ನ ಬಡಾವಣೆಯೊಂದರಲ್ಲಿ ಪಕ್ಷವೊಂದರ ಕಾರ್ಯಕರ್ತರು ಮತದಾರರಿಗೆ ವಿತರಣೆ ಮಾಡಲು ತಂದಿದ್ದ 80 ಸೀರೆಗಳನ್ನು ಚುನಾವಣೆ ಅಧಿಕಾರಿಗಳು ತಡೆದಿದ್ದು, ಸೀರೆಗಳನ್ನು ವಶಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News