×
Ad

ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ಅಮೋಲ್ ಕಾಳೆ ಎಸ್‌ಐಟಿ ವಶಕ್ಕೆ

Update: 2019-05-30 22:57 IST
ಡಾ.ಎಂ.ಎಂ.ಕಲಬುರ್ಗಿ

ಬೆಂಗಳೂರು, ಮೇ 30: ವಿಚಾರವಾದಿ, ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ಮುಂದುವರೆಸಿದ್ದು, ಈ ಸಂಬಂಧ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿಯಾದ ಅಮೋಲ್ ಕಾಳೆ ಅನ್ನು ಧಾರವಾಡ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಅನುಮತಿ ಪಡೆದು ತನಿಖೆಗಾಗಿ ಮತ್ತೆ ವಶಕ್ಕೆ ಪಡೆದಿದ್ದಾರೆ.

ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದಲ್ಲೂ ಅಮೋಲ್ ಕಾಳೆ ಭಾಗಿಯಾಗಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು, 11 ದಿನ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಅಮೋಲ್ ಕಾಳೆ ನೇತೃತ್ವದಲ್ಲಿ ಗೌರಿ ಹತ್ಯೆ ಮಾಡಿದ ಆರೋಪಿಗಳಿಗೆ ಮಹಾರಾಷ್ಟ್ರ, ಕರ್ನಾಟಕದ 19 ಪ್ರದೇಶಗಳಿಗೆ ಹಂತಕರಿಗೆ ಒಂಭತ್ತು ವರ್ಷದ ಹಿಂದೆಯೇ ತರಬೇತಿ ನೀಡಿದ್ದ. ಈ ತರಬೇತಿಯ ನಂತರ ಆಗಸ್ಟ್ 30, 2015 ರಂದು ವಿಚಾರವಾದಿ ಡಾ.ಎಂ.ಎಂ ಕಲಬುರ್ಗಿ ಹತ್ಯೆ ನಡೆದಿತ್ತು. ಬಳಿಕ ಗೌರಿ ಲಂಕೇಶ್ ಹತ್ಯಾ ಪ್ರಕರಣ ನಡೆದಿತ್ತು. ಹೀಗಾಗಿ, ಎಸ್‌ಐಟಿ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News