×
Ad

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ ಹಿನ್ನಡೆ

Update: 2019-05-31 18:39 IST

ಬೆಂಗಳೂರು, ಮೇ 31: ರಾಜ್ಯದಲ್ಲಿ ಎರಡನೆ ಹಂತದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಬಿಜೆಪಿಗೆ, ಜೆಡಿಎಸ್‌ಗೂ ಹಿನ್ನಡೆಯಾಗಿದೆ.

ರಾಜ್ಯದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಸೇರಿದಂತೆ 61 ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಮತ ಎಣಿಕೆ ಮುಕ್ತಾಯಗೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದಿದ್ದ ಬಿಜೆಪಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚೇತರಿಸಿಕೊಂಡಿವೆ.

ನಗರಸಭೆಯ 248 ಕ್ಷೇತ್ರಗಳ 217, ಪಟ್ಟಣ ಪಂಚಾಯತಿಯ 330 ಸ್ಥಾನಗಳ ಪೈಕಿ 290 ಹಾಗೂ ಪುರಸಭೆಯ 783 ಸ್ಥಾನಗಳ ಪೈಕಿ 714 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ 509, ಬಿಜೆಪಿ 366, ಜೆಡಿಎಸ್ 174, ಬಿಎಸ್ಪಿ 3, ಸಿಪಿಎಂ 2 ಹಾಗೂ ಪಕ್ಷೇತರರು 160 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ರಾಜ್ಯದ ಹಲವು ಕಡೆಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂತಹ ಕಡೆ ಮೈತ್ರಿ ಮಾಡಿಕೊಳ್ಳುವುದು, ಇಲ್ಲವೇ ಪಕ್ಷೇತರರ ಬೆಂಬಲ ಪಡೆದು ಅಧಿಕಾರ ರಚಿಸಬೇಕಾದ ಪರಿಸ್ಥಿತಿ ಇದೆ.

ನಗರಸಭೆಯ ಒಟ್ಟು 217 ಸ್ಥಾನಗಳ ಪೈಕಿ ಕಾಂಗ್ರೆಸ್ 90, ಬಿಜೆಪಿ 56, ಜೆಡಿಎಸ್ 38, ಬಿಎಸ್ಪಿ 2, ಪಕ್ಷೇತರರು 25 ಮತ್ತು ಇತರರು 6 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಪುರಸಭೆಯ 714 ಸ್ಥಾನಗಳ ಪೈಕಿ ಕಾಂಗ್ರೆಸ್ 322, ಬಿಜೆಪಿ 184, ಜೆಡಿಎಸ್ 102, ಬಿಎಸ್ಪಿ1, ಸಿಪಿಎಂ 2, ಪಕ್ಷೇತರರು 102 ಹಾಗೂ ಇತರರು 1 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಪಟ್ಟಣ ಪಂಚಾಯ್ತಿಯ 290 ವಾರ್ಡ್‌ಗಳಲ್ಲಿ ಬಿಜೆಪಿ 126, ಕಾಂಗ್ರೆಸ್ 97, ಜೆಡಿಎಸ್ 34 ಹಾಗೂ ಇತರರು 33 ಸ್ಥಾನಗಳಲ್ಲಿ ಗೆಲುವು ಪಡೆದಿದ್ದಾರೆ.
ನಗರ ಪಾಲಿಕೆ ಚುನಾವಣೆಯಲ್ಲಿ ಕೆಲವು ಕಡೆ ಮತದಾರರು ಒಂದೇ ಪಕ್ಷಕ್ಕೆ ಸ್ಪಷ್ಟವಾದ ಜನಾದೇಶ ನೀಡಿದ್ದರೆ, ಕೆಲವು ಕಡೆಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. 8 ನಗರಸಭೆಗಳಿಗೆ ಚುನಾವಣೆ ನಡಿದ್ದು, ಶಹಾಪುರ ಹಾಗೂ ಬಸವಕಲ್ಯಾಣ ಬಿಟ್ಟರೆ ಎಲ್ಲಿಯೂ ಸ್ಪಷ್ಟವಾದ ಬಹುಮತ ಸಿಕ್ಕಿಲ್ಲ. 30 ಪುರಸಭೆಗಳಿಗೆ ನಡೆದ ಚುನಾವಣೆಯಲ್ಲಿ 22 ಕಡೆ ಸ್ಪಷ್ಟ ಬಹುಮತ ಸಿಕ್ಕಿದ್ದು, 8 ಕಡೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಎರಡು ಕಡೆ ಪಕ್ಷೇತರ ಅಭ್ಯರ್ಥಿಗಳು ಸ್ಪಷ್ಟ ಬಹುಮತ ಪಡೆದಿದ್ದು, ಪಕ್ಷಗಳು ಅತಂತ್ರವಾಗಿವೆ.
ಇನ್ನುಳಿದಂತೆ ಪಟ್ಟಣ ಪಂಚಾಯತ್‌ಗಳ 22ಕ್ಕೆ ಚುನಾವಣೆ ನಡೆದಿದ್ದು, 10 ಕಡೆಗಳಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಅತಂತ್ರಗೊಂಡಿರುವ ಕಡೆಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರದೊಂದಿಗೆ ಆಡಳಿತ ನಡೆಸಲು ತಯಾರಿ ನಡೆಸಿದ್ದರೆ, ಬಿಜೆಪಿಯು ಪಕ್ಷೇತರರೊಂದಿಗೆ ಸೇರಿ ಅಧಿಕಾರದ ಗದ್ದುಗೆ ಹಿಡಿಯಲು ಶತಪ್ರಯತ್ನ ಮಾಡುತ್ತಿದೆ.

ಎಲ್ಲಿ ಎಷ್ಟು ಸ್ಥಾನ:
ಬೆಂಗಳೂರು ನಗರ: ಕಾಂಗ್ರೆಸ್-17, ಬಿಜೆಪಿ-10
ಚಿತ್ರದುರ್ಗ: ಕಾಂಗ್ರೆಸ್-22, ಬಿಜೆಪಿ-20, ಜೆಡಿಎಸ್-3, ಪಕ್ಷೇತರರು-18
ದಾವಣಗೆರೆ: ಕಾಂಗ್ರೆಸ್-10, ಬಿಜೆಪಿ-5, ಜೆಡಿಎಸ್-14, ಪಕ್ಷೇತರರು-2
ಕೋಲಾರ: ಕಾಂಗ್ರೆಸ್-39, ಬಿಜೆಪಿ-11, ಜೆಡಿಎಸ್-14, ಪಕ್ಷೇತರರು-13
ಚಿಕ್ಕಬಳ್ಳಾಪುರ: ಕಾಂಗ್ರೆಸ್-26, ಬಿಜೆಪಿ-2, ಜೆಡಿಎಸ್-11, ಬಿಎಸ್ಪಿ-2, ಸಿಪಿಎಂ-2, ಪಕ್ಷೇತರರು-11
ತುಮಕೂರು: ಕಾಂಗ್ರೆಸ್-45, ಬಿಜೆಪಿ-21, ಜೆಡಿಎಸ್-15, ಪಕ್ಷೇತರರು-10
ಮೈಸೂರು: ಕಾಂಗ್ರೆಸ್-31, ಬಿಜೆಪಿ-18, ಜೆಡಿಎಸ್-23, ಪಕ್ಷೇತರರು-5
ಚಿಕ್ಕಮಗಳೂರು:ಕಾಂಗ್ರೆಸ್-27, ಬಿಜೆಪಿ-27, ಜೆಡಿಎಸ್-7, ಪಕ್ಷೇತರರು-6
ದಕ್ಷಿಣ ಕನ್ನಡ: ಕಾಂಗ್ರೆಸ್-24, ಬಿಜೆಪಿ-34, ಜೆಡಿಎಸ್-1, ಪಕ್ಷೇತರರು-2
ಹಾಸನ: ಕಾಂಗ್ರೆಸ್-6, ಬಿಜೆಪಿ-8, ಜೆಡಿಎಸ್-11, ಪಕ್ಷೇತರರು- 3
ಮಂಡ್ಯ: ಕಾಂಗ್ರೆಸ್-23, ಬಿಜೆಪಿ-4, ಜೆಡಿಎಸ್-32, ಪಕ್ಷೇತರರು-10
ಚಾಮರಾಜನಗರ: ಕಾಂಗ್ರೆಸ್-22, ಬಿಜೆಪಿ-17, ಜೆಡಿಎಸ್-6, ಪಕ್ಷೇತರರು-1, ಇತರರು-1
ವಿಜಯಪುರ: ಕಾಂಗ್ರೆಸ್-24, ಬಿಜೆಪಿ-20, ಜೆಡಿಎಸ್-3, ಪಕ್ಷೇತರರು-22
ಧಾರವಾಡ: ಕಾಂಗ್ರೆಸ್-18, ಬಿಜೆಪಿ-18, ಜೆಡಿಎಸ್-17, ಪಕ್ಷೇತರರು-5
ಗದಗ: ಕಾಂಗ್ರೆಸ್-12, ಬಿಜೆಪಿ-29, ಜೆಡಿಎಸ್-1, ಪಕ್ಷೇತರರು-4
ಹಾವೇರಿ: ಕಾಂಗ್ರೆಸ್-12, ಬಿಜೆಪಿ-22, ಪಕ್ಷೇತರರು-12
ಉತ್ತರ ಕನ್ನಡ: ಕಾಂಗ್ರೆಸ್-6, ಬಿಜೆಪಿ-27, ಜೆಡಿಎಸ್-2, ಪಕ್ಷೇತರರು-23
ಬೀದರ್: ಕಾಂಗ್ರೆಸ್-75, ಬಿಜೆಪಿ-31, ಜೆಡಿಎಸ್-13, ಬಿಎಸ್ಪಿ-1, ಪಕ್ಷೇತರರು 4, ಇತರರು 4
ಬಳ್ಳಾರಿ: ಕಾಂಗ್ರೆಸ್-54, ಬಿಜೆಪಿ-30, ಜೆಡಿಎಸ್-1, ಪಕ್ಷೇತರರು-8
ಯಾದಗಿರಿ: ಕಾಂಗ್ರೆಸ್-16, ಬಿಜೆಪಿ-12, ಪಕ್ಷೇತರರು-1, ಇತರರು-2

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News