×
Ad

ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ಶಂಕೆ: ಅಡ್ವೊಕೇಟ್ ತಾಹೆರ್ ಹುಸೇನ್.

Update: 2019-05-31 20:53 IST

ಬೆಂಗಳೂರು: ಇಂದು ಪ್ರಕಟವಾದ ಕರ್ನಾಟಕ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಗಣನೀಯ ಪ್ರಮಾಣದ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಈ ಫಲಿತಾಂಶವು ಜನರ ಒಲವು ಯಾವ ಕಡೆ ಇದೆ ಎಂಬುದನ್ನು ಬೆಟ್ಟು ಮಾಡುತ್ತದೆ. ಆದರೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 28ರಲ್ಲಿ 25 ಸ್ಥಾನಗಳನ್ನು ತನ್ನದಾಗಿಸಿ ಭರ್ಜರಿ ಯಶಸ್ಸು ಕಂಡಿತ್ತು. ಬಿಜೆಪಿಯ ಈ ಅನಿರೀಕ್ಷಿತ ಯಶಸ್ಸಿನ  ಮೇಲೆ ಈಗ ಜನರು ಶಂಕೆ ವ್ಯಕ್ತಪಡಿಸಲು ಆರಂಭಿಸಿದ್ದಾರೆ, ಇವಿಎಮ್ ಮೇಲೆ ಶಂಕೆ ವ್ಯಕ್ತಪಡಿಸಿ ಈಗಾಗಲೆ ವಿವಿಧ ಪಕ್ಷಗಳ ನಾಯಕರು ರಂಗಕ್ಕಿಳಿದಿದ್ದು  ಕರ್ನಾಟಕದಲ್ಲೂ ಕೂಡ ಫಲಿತಾಂಶ ಏರುಪೇರಿಗೆ ಕಾರಣವಾಗಿರಬಹುದು ಎಂದು ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷರಾದ ಅಡ್ವೊಕೇಟ್ ತಾಹೆರ್ ಹುಸೇನ್ ರವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News