ಶ್ರೀರಾಂಪುರ ರಿಂಗ್ ರಸ್ತೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ಐವರ ಬಂಧನ
Update: 2019-05-31 21:20 IST
ಮೈಸೂರು,ಮೇ.31: ನಗರದ ಹೊರವಲಯದ ಶ್ರೀರಾಮಪುರ ರಿಂಗ್ ರಸ್ತೆಯಲ್ಲಿ ಮಹಿಳೆಯೋರ್ವಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಹಾಗೂ ಕುವೆಂಪುನಗರ ಠಾಣೆಯ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೆ.ಜಿ.ಕೊಪ್ಪಲು ನಿವಾಸಿಗಳಾದ ಕಾರ್ತಿಕ್ ಗೌಡ, ಸೂರ್ಯಕುಮಾರ್, ಜೀವನ್, ದಿಲೀಪ್, ಪ್ರಶಾಂತ್ ಎಂದು ಗುರುತಿಸಲಾಗಿದೆ. ಇವರು ಮೇ.8ರಂದು ರಾತ್ರಿ 10.30ರ ಸುಮಾರಿಗೆ ತನ್ನ ಸ್ನೇಹಿತನೊಂದಿಗೆ ಸುತ್ತಾಡಲು ತೆರಳಿದ್ದ ಮಹಿಳೆಯೋರ್ವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ತಡೆಯಲು ಬಂದ ಆಕೆಯ ಸ್ನೇಹಿತನ ಕಾಲಿನ ಮೇಲೆ ಕಲ್ಲನ್ನು ಎತ್ತಿ ಹಾಕಿದ್ದರು. ಇದೀಗ ಐವರನ್ನು ಬಂಧಿಸಿರುವ ಪೊಲೀಸರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.