ಉಪ ಚುನಾವಣೆಗಳ ಫಲಿತಾಂಶ ಪ್ರಕಟ

Update: 2019-05-31 17:24 GMT

ಬೆಂಗಳೂರು, ಮೇ 31: ವಿವಿಧ ಕಾರಣಗಳಿಂದ ತೆರವುಗೊಂಡಿದ್ದ ತಾಲೂಕು ಪಂಚಾಯತ್ ಸ್ಥಾನಗಳಿಗೆ ನಡೆದ ಉಪ ಚುನಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶವೂ ಪ್ರಕಟವಾಗಿದೆ.

ತಾಲೂಕು ಪಂಚಾಯತ್ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-4, ಬಿಜೆಪಿ-4, ಜೆಡಿಎಸ್-1 ಹಾಗೂ ಪಕ್ಷೇತರ ಅಭ್ಯರ್ಥಿ1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.

ಬೆಂಗಳೂರು ಪೂರ್ವ ತಾಲೂಕಿನ ಕಣ್ಣೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರದಲ್ಲಿ ಕಾಂಗ್ರೆಸ್, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿಯಲ್ಲಿ ಬಿಜೆಪಿ, ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿಯಲ್ಲಿ ಕಾಂಗ್ರೆಸ್, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಿಪ್ಪರಗಾ ಎಸ್.ಎನ್‌ನಲ್ಲಿ ಬಿಜೆಪಿ, ಬೀದರ್ ತಾಲೂಕಿನ ಮರಕುಂದಾದಲ್ಲಿ ಜೆಡಿಎಸ್, ರಾಯಚೂರಿನ ಸಿಂಧನೂರು ತಾಲೂಕಿನ ಥಡೇಸೂಗೂರು ಹಾಗೂ ಉದ್ಬಾಳ ಎರಡಲ್ಲೂ ಕಾಂಗ್ರೆಸ್, ಯಾದಗಿರಿ ಜಿಲ್ಲೆಯ ಶೋರಾಪುರದ ಹೆಬ್ಬಾಳ ಹಾಗೂ ಗೆದ್ದಲಮರಿಯ ಎರಡರಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ.

ಇನ್ನುಳಿದಂತೆ ವಿವಿಧ ಕಾರಣಗಳಿಂದ ತೆರವಾಗಿದ್ದ ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆಯಲ್ಲಿ ಕಾವೇರಿಪುರದಲ್ಲಿ ಬಿಜೆಪಿ, ಸಗಾಯಪುರ ಕಾಂಗ್ರೆಸ್, ಹೆಬ್ಬಗೋಡಿ ನಗರಸಭೆ ವಾರ್ಡ್ ನಂ.26ರಲ್ಲಿ ಜೆಡಿಎಸ್, ತುಮಕೂರು ಮಹಾ ನಗರ ಪಾಲಿಕೆ ವಾರ್ಡ್ ನಂ.22 ರಲ್ಲಿ ಜೆಡಿಎಸ್, ಬೆಳಗಾವಿಯದ ಸದಲಗಾ ಪುರಸಭೆ ವಾರ್ಡ್ ನಂ.19 ರಲ್ಲಿ ಕಾಂಗ್ರೆಸ್, ಮುಗಳಖೋಡ ಪುರಸಭೆಯ ವಾರ್ಡ್ ನಂ.2 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News