ಹನೂರು: ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ ಅತಂತ್ರ

Update: 2019-06-01 11:35 GMT

ಹನೂರು: ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ ಅತಂತ್ರವಾಗಿ ಹೊರಹೊಮ್ಮಿದ್ದು 13ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ 6 ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದರೆ, ಕಾಂಗ್ರೆಸ್ 4 ಸ್ಥಾನ ಜಯಗಳಿಸಿ ಬಿಜೆಪಿ ಕೇವಲ 3 ಮೂರು ಸ್ಥಾನಗಳಿಗೆ ತೃಪ್ತಿಪಟ್ಟಿದೆ.

ವಿಜೇತ ಅಭ್ಯರ್ಥಿಗಳು ಗಳಿಸಿದ ಮತಗಳ ವಿವರ: ಪಟ್ಟಣ ಪಂಚಾಯತ್ ವ್ಯಾಪ್ತಿಯ 1 ನೇ ವಾರ್ಡ್‍ನಿಂದ  ಸ್ಪರ್ಧಿಸಿದ್ದ  ಜೆಡಿಎಸ್ ಪಕ್ಷದ ಮಮ್ತಾಜ್ ಬಾನು 399 ಮತಗಳನ್ನು ಪಡೆದು ಜಯಗಳಿಸಿದರೆ, ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಶಶಿಕಲಾ 210, ಬಿಜೆಪಿ ಅಭ್ಯರ್ಥಿ ಚಿಕ್ಕತಾಯಮ್ಮ 22 ಮತ ಗಳಿಸಿದರು. 2ನೇ ವಾರ್ಡ್‍ನಿಂದ ಬಿಜೆಪಿ ಪಕ್ಷದ ಅಭ್ಯರ್ಥಿ ನಾಗಾರಾಜು 256 ಮತಗಳನ್ನು ಪಡೆದು ಜಯಗಳಿಸಿದರೆ ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಸುದೇಶ್ 231 ಮತಗಳು ಹಾಗೂ ಜೆಡಿಎಸ್ ಅಭ್ಯರ್ಥಿ ಮಣಿಗೋವಿಂದ 175 ಮತಗಳನ್ನು ಪಡೆದರು. 3ನೇ ವಾರ್ಡ್‍ನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹರೀಶ್‍ಕುಮಾರ್ 322 ಮತಗಳನ್ನು ಪಡೆದು ಗೆದ್ದರೆ, ಇವರ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಮೂರ್ತಿನಾಯ್ಡು 122, ಬಿಜೆಪಿ ಅಭ್ಯರ್ಥಿ ಕಾಂತರಾಜು 18 ಮತ ಗಳಸಲಷ್ಟೆ ಶಕ್ತರಾದರು. 4ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಗಂಗಾ 283 ಮತ ಪಡೆದು ಜಯಗಳಿಸಿದರೆ, ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ರಾಜಮಣಿ 173 ಮತ ಪಡೆದರು. 

5ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ರೂಪ 234 ಮತ ಪಡೆದ ಜಯಗಳಿಸಿದರೆ, ಇವರ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಹಾದೇವಮ್ಮ 206 ಮತ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಾವಿತ್ರಮ್ಮ 173 ಮತ ಪಡೆದರು. 6ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಮಹೇಶ್‍ನಾಯ್ಕ 244 ಮತ ಪಡೆದು ಜಯಗಳಿಸಿದರೆ, ಇವರ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅಂಕಚಾರಿ 116, ಕಾಂಗ್ರೆಸ್ ಅಭ್ಯರ್ಥಿ 37 ಮತ ಪಡೆದಿದ್ದಾರೆ. 7ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಪವಿತ್ರ 514 ಮತ ಪಡೆದು ಜಯಗಳಿಸಿದರೆ, ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರೇಮ 95 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪಾಪತಮ್ಮ 88 ಮತಗಳನ್ನು ಪಡೆದರು.

8ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಆನಂದ್‍ಕುಮಾರ್ 253 ಮತಗಳನ್ನು ಪಡೆದು ಜಯಗಳಿಸಿದರೆ, ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ 211, ಬಿಜೆಪಿ ಅಭ್ಯರ್ಥಿ ವಾಸುದೇವ 7 ಮತ ಪಡೆದಿದ್ದಾರೆ. 9ನೇ ವಾರ್ಡಿನ ಅಭ್ಯರ್ಥಿ ಗಿರೀಶ್ 236 ಮತ ಪಡೆದು ಜಯಗಳಿಸಿದರೆ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಹಾದೇವಸ್ವಾಮಿ 189 ಮತಗಳು, ಬಿಜೆಪಿ ಮಂಜೇಶ್ 03 ಮತ ಪಡೆದರು. 10ನೇ ವಾರ್ಡಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೋಮಶೇಖರ್ 281 ಮತಗಳನ್ನು ಪಡೆದು ಜಯಗಳಿಸಿದರೆ, ಪ್ರತಿಸ್ಪರ್ಥಿ ಜೆಡಿಎಸ್ ಪಕ್ಷದ ಮೋಹನ್‍ ಕುಮಾರ್ 274, ಬಿಜೆಪಿ ಅಭ್ಯರ್ಥಿ ಗೋವಿಂದರಾಜು 94 ಮತ ಗಳಿಸಿದ್ದಾರೆ. 11 ನೇ ವಾರ್ಡಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಪತ್‍ಕುಮಾರ್ 203 ಮತಗಳನ್ನು ಗಳಿಸಿ ಜಯಗಳಿಸಿದರೆ, ಪ್ರತಿಸ್ಪರ್ಥಿ ಜೆಡಿಎಸ್ ಪಕ್ಷದ ಮಹಾದೇವ್‍ನಾಯಕ 185, ಬಿಜೆಪಿ ಪುಟ್ಟರಾಜು 34, ಪಕ್ಷೇತರ ಅಭ್ಯರ್ಥಿ ಸಂತೋಷ್ 15 ಮತಗಳನ್ನು ಪಡೆದುಕೊಂಡಿದ್ದಾರೆ.

12 ನೇ ವಾರ್ಡಿನ ಬಿಜೆಪಿ ಪಕ್ಷದ ಚಂದ್ರಮ್ಮ 246 ಮತಗಳನ್ನು ಗಳಿಸಿ ಜಯಗಳಿಸಿದರೆ. ಪ್ರತಿಸ್ಪರ್ಥಿ ಜೆಡಿಎಸ್ ಪಕ್ಷದ ಮೀನಾಕ್ಷಿ 180, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉರಮತ್ ಬಾನು 81 ಮತ ಹಾಗೂ 13 ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಮಹೇಶ್ 376  ಮತಗಳನ್ನು ಪಡೆದು ಜಯಗಳಿಸಿದರೆ, ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜು 290 , ಬಿಜೆಪಿ ಅಭ್ಯರ್ಥಿ ಲಿಂಗಾಮೃತಸ್ವಾಮಿ  18 ಮತಗಳನ್ನು ಪಡೆದರು.

ಕಾರ್ಯಕರ್ತರಿಂದ ಸಂಭ್ರಮ: ಎಲ್ಲಾ ವಾರ್ಡ್‍ಗಳ ಪಲಿತಾಂಶ ಹೂರಹೂಮ್ಮತ್ತಿದಂತೆ ವಿಜೇತ ಪಕ್ಷದ ಅಭ್ಯರ್ಥಿಗಳ ಅಭಿಮಾನಿಗಳು ಮತ್ತು ಕಾರ್ಯಕರ್ತರು  ಶಾಲೆಯ ಮುಂಭಾಗ ಪಟಾಕಿ ಸಿಡಿಸಿ ತಮ್ಮ ಅಭ್ಯರ್ಥಿಗಳ ಪರ ಜೈಕಾರ ಕೂಗುವ ಮೂಲಕ ಸಂಭ್ರಮಿಸಿದರು   

ಈ ವೇಳೆ ಜಯಶೀಲರಾದ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿ ಟಿ.ಆರ್.ಸ್ವಾಮಿ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು. ಮತ ಎಣಿಕೆ ಕೇಂದ್ರ ಸೇರಿದಂತೆ ಪಟ್ಟಣದ ವಿವಿಧಡೆ ಬಿಗಿಪೊಲೀಸ್ ಬಂದುಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ, ಡಿವೈಎಸ್‍ಪಿ ಪುಟ್ಟಮಾದಯ್ಯ, ಹನೂರು ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಮೋಹಿತ್‍ಸಹದೇವ, ಮಲೆಮಹದೇಶ್ವರ ಬೆಟ್ಟ ಠಾಣೆಯ ಸಿಪಿಐ ಗೋಪಾಲಕೃಷ್ಣ, ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪಿಎಸ್‍ಐ ವನರಾಜು ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ ಎಣಿಕೆ ಕೇಂದ್ರದಲ್ಲಿ ಮೊಕ್ಕಾಂ ಹೂಡಿದ್ದರು.

ಚುನಾವಣಾಧಿಕಾರಿ ಟಿ.ಆರ್.ಸ್ವಾಮಿ, ಮಾದರಿ ನೀತಿ ಸಂಹಿತೆ ಅಧಿಕಾರಿ ಗಂಗಾಧರ್, ತಹಶೀಲ್ದಾರ್ ನಾಗರಾಜು,  ಎಣಿಕಾ ಅಧಿಕಾರಿಗಳಾದ ಶಾಂತರಾಜು, ಶಿವಣ್ಣ, ಸಹಾಯಕ ಚುನಾವಣಾಧಿಕಾರಿ ಹೆಚ್.ಕ್ಯಾತ, ಉಪತಹಶೀಲ್ದಾರ್ ಸುರೇಖಾ, ಆರ್.ಐ.ಮಾದೇಶ್ ಚುನಾವಣೆ ಮತ ಎಣಿಕೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News