ಜೂ.5 ರಂದು ಭಾರತದೊಂದಿಗೆ ಅಮೆರಿಕದ ಆದ್ಯತೆಯ ವ್ಯಾಪಾರ ಅಂತ್ಯ: ಡೊನಾಲ್ಡ್ ಟ್ರಂಪ್

Update: 2019-06-01 06:02 GMT

ನ್ಯೂಯಾರ್ಕ್, ಜೂ.1: ಭಾರತದೊಂದಿಗೆ ಆದ್ಯತೆಯ ವ್ಯಾಪಾರವನ್ನು ಅಮೆರಿಕ ಜೂ.5ರಂದು ಕೊನೆಗೊಳಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

 ಭಾರತವನ್ನು ಆದ್ಯತೆಯ ಸಾಮಾನ್ಯ ವ್ಯವಸ್ಥೆ(ಜಿಎಸ್‌ಪಿ)ಕಾರ್ಯಕ್ರಮದಿಂದ ಹೊರಗಿಡುವ ತನ್ನ ಉದ್ದೇಶವನ್ನು ಮಾರ್ಚ್ ಆರಂಭದಲ್ಲಿ ಟ್ರಂಪ್ ಪ್ರಕಟಿಸಿದ್ದರು.

 ‘‘ಭಾರತವು ಅಮೆರಿಕದ ಮಾರುಕಟ್ಟೆಗೆ ನ್ಯಾಯಸಮ್ಮತ ಹಾಗೂ ಸಮಂಜಸವಾದ ಪ್ರವೇಶ ಒದಗಿಸುವ ಕುರಿತು ಭರವಸೆ ನೀಡಿಲ್ಲ ಎಂದು ನಾನು ನಿರ್ಧರಿಸಿದ್ದೇನೆ’’ ಎಂದು ಟ್ರಂಪ್ ಶುಕ್ರವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಭಾರತವು ಆದ್ಯತೆಯ ಸಾಮಾನ್ಯ ವ್ಯವಸ್ಥೆ(ಜಿಎಸ್‌ಪಿ)ಕಾರ್ಯಕ್ರಮದ ಅತ್ಯಂತ ದೊಡ್ಡ ಫಲಾನುಭವಿಯಾಗಿದೆ. ಈ ಕಾರ್ಯಕ್ರಮದಿಂದ ದಕ್ಷಿಣ ಏಶ್ಯಾ ದೇಶಗಳಿಂದ 5.6 ಬಿಲಿಯನ್ ಡಾಲರ್‌ಗೂ ಅಧಿಕ ಆಮದಿಗೆ ಶುಲ್ಕಮುಕ್ತವಾಗಿರುತ್ತದೆ.

ಒಂದು ವೇಳೆ ಟ್ರಂಪ್ ಭಾರತವನ್ನು ಜಿಎಸ್‌ಪಿಯಿಂದ ಕೈಬಿಟ್ಟರೆ ಅಮೆರಿಕದ 20ಕ್ಕೂ ಅಧಿಕ ಸರಕುಗಳ ಮೇಲೆ ಆಮದು ಸುಂಕ ಏರಲಿದೆ ಎಂದು ಭಾರತೀಯ ಅಧಿಕಾರಿಗಳು ನಿರೀಕ್ಷಿಸಿದ್ದಾರೆ. ಭಾರತವನ್ನು ಜಿಎಸ್‌ಪಿಯಿಂದ ಹೊರಗಿಡದಂತೆ ಮೇ 3 ರಂದು ಅಮೆರಿಕ ಕಾಂಗ್ರೆಸ್‌ನ 24 ಸದಸ್ಯರು ಆಡಳಿತಕ್ಕೆ ಮನವಿ ಪತ್ರ ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News