ಸ್ಥಳೀಯ ಸಂಸ್ಥೆಗಳ ಚುನಾವಣೆ: ಶೇ.73.63 ರಷ್ಟು ಮತದಾನ

Update: 2019-06-01 16:32 GMT

ಬೆಂಗಳೂರು, ಜೂ.1: ಕಾರಣಾಂತರಗಳಿಂದ ಚುನಾವಣೆ ಮುಂದೂಡಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣ ಪಂಚಾಯತಿ ಹಾಗೂ ನೆಲಮಂಗಲ ಪುರಸಭೆಗೆ ಚುನಾವಣೆ ನಡೆದಿದ್ದು, ಶೇ.73.63 ರಷ್ಟು ಮತದಾನವಾಗಿದೆ.

ಸೊರಬ ಪಟ್ಟಣ ಪಂಚಾಯತ್ ನಲ್ಲಿ 12 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಶೇ.74.94 ಮತದಾನವಾಗಿದೆ. ನೆಲಮಂಗಲ ಪುರಸಭೆಯಲ್ಲಿ 22 ವಾರ್ಡ್‌ಗಳಲ್ಲಿ ಚುನಾವಣೆ ನಡೆದಿದ್ದು, ಶೇ.72.89 ರಷ್ಟು ಮತದಾನವಾಗಿದೆ. ಎರಡೂ ಸಂಸ್ಥೆಗಳ ವ್ಯಾಪ್ತಿಯಲ್ಲಿನ 122 ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದೆ.

ನಾಳೆ ಮತ ಎಣಿಕೆ: ಮೇ 29 ರಂದು ಚುನಾವಣೆ ನಡೆದು, ಮತ ಎಣಿಕೆಯಾಗದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪುರಸಭೆ, ಶಿವಮೊಗ್ಗ ಜಿಲ್ಲೆಯ ಸಾಗರ, ಶಿಕಾರಿಪುರ ಪುರಸಭೆಗಳು, ಶಿರಾಳಕೊಪ್ಪ, ಹೊಸನಗರ ಪಟ್ಟಣ ಪಂಚಾಯತ್ ಗಳು ಸೇರಿದಂತೆ, ಇಂದು ಮತದಾನ ನಡೆದ ಕ್ಷೇತ್ರಗಳ ಮತ ಎಣಿಕೆ ಜೂ.3 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News