ತಾಯಿಯೊಂದಿಗೆ ಜಗಳ ಮಾಡುತ್ತಿದ್ದ ಬಗ್ಗೆ ಪ್ರಶ್ನಿಸಿದ ಅಣ್ಣನನ್ನೇ ಕೊಲೆಗೈದ ತಮ್ಮ !
Update: 2019-06-02 22:37 IST
ಚನ್ನಗಿರಿ: ಕ್ಷುಲಕ ಕಾರಣಕ್ಕಾಗಿ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ತಾಲೂಕಿನ ಸಂತೇಬೆನ್ನೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ.
ಜಯರಾಮ್ (45) ಕೊಲೆಯಾದ ವ್ಯಕ್ತಿ. ಮಹಾಂತೇಶ (40) ಅಣ್ಣನನ್ನು ಕೊಲೆ ಮಾಡಿದ ತಮ್ಮ. ಕೊಲೆ ಮಾಡಿದ ಮಹಾಂತೇಶ ತನ್ನ ತಾಯಿಯೊಂದಿಗೆ ಸದಾ ಜಗಳ ಮಾಡುತ್ತಿದ್ದ. ಈ ಬಗ್ಗೆ ಅಣ್ಣ ಜಯರಾಮ್ ಪ್ರಶ್ನೆ ಮಾಡಿದಕ್ಕೆ ಸಿಟ್ಟಿಗೆದ್ದ ಆತ ಅಣ್ಣನಿಗೆ ಆಯುಧದಿಂದ ಹೊಡೆದಿದ್ದಾನೆ. ಹಲ್ಲೆಯಿಂದ ತೀವ್ರಗಾಯಗೊಂಡ ಜಯರಾಮ್ ನನ್ನು ಕೂಡಲೇ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ರವಿವಾರ ಬೆಳಗಿನ ಜಾವ 3 ಗಂಟೆಗೆ ಜಯರಾಮ್ ಸಾವನ್ನಪ್ಪಿದ್ದಾರೆ.
ಈ ಕುರಿತು ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.