ಓ ಮೆಣಸೇ…

Update: 2019-06-02 18:30 GMT

ನಾನು ಪ್ರಕಾಶ್ ರೈ ಅಭಿಮಾನಿ - ಪ್ರತಾಪ್‌ಸಿಂಹ, ಸಂಸದ

ಪ್ರಕಾಶ್ ರೈ ಅವಮಾನದಿಂದ ಮುಖ ಮುಚ್ಚಿಕೊಂಡರಂತೆ.

------------------- --
ನನ್ನ ಸೋಲಿಗೆ ರಾಹುಲ್‌ಗಾಂಧಿ ಕಾರಣ - ವೀರಪ್ಪ ಮೊಯ್ಲಿ, ಮಾಜಿ ಸಂಸದ
ನಿಮ್ಮಂಥವರನ್ನು ಕಾಂಗ್ರೆಸ್‌ನಲ್ಲಿ ಇನ್ನೂ ಉಳಿಸಿರುವುದೇ ಕಾಂಗ್ರೆಸ್ ಸೋಲಿಗೆ ನಿಜವಾದ ಕಾರಣ.

---------------------
ಪ್ರಧಾನಿ ಮೋದಿಗೆ ನೆಹರೂ, ಇಂದಿರಾ ವರ್ಚಸ್ಸಿದೆ - ರಜನಿಕಾಂತ್, ನಟ
ರಜನಿಕಾಂತ್ ಅವರ ಸೂಪರ್ ಪವರ್ ಕೂಡ ಇದೇ ಎನ್ನುವುದು ಭಕ್ತರ ನಂಬಿಕೆ.

---------------------
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವೇ ಸೂಕ್ತ - ಪ್ರಹ್ಲಾದ್ ಜೋಷಿ, ಸಂಸದ
ಬಿಜೆಪಿ ಅಧಿಕಾರ ಹಿಡಿಯದ ರಾಜ್ಯಗಳಲ್ಲೆಲ್ಲ ರಾಷ್ಟ್ರಪತಿ ಆಡಳಿತ ಹೇರಿದರೆ ಹೇಗೆ?
---------------------

ಪಕ್ಷ ಬಯಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧ - ಯು.ಟಿ.ಖಾದರ್, ಸಚಿವ
ಬಯಸುವುದನ್ನು ಕಾಯದೆ ರಾಜೀನಾಮೆ ಬೀಸಾಕಬಾರದೇ?
---------------------

ಪ್ರಧಾನಿ ಮೋದಿ ದೇಶದ ಭವಿಷ್ಯದ ಭೀಮನಾಗಲಿ - ಎಚ್.ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ
ದೇವೇಗೌಡರನ್ನು ದುರ್ಯೋಧನನ್ನಾಗಿಸಿ ತೊಡೆ ಮುರಿಸುವ ಉದ್ದೇಶವೇ?
---------------------

ನನ್ನ ಸೋಲಿಗೆ ನಾನೇ ಕಾರಣ - ನಿಖಿಲ್‌ಕುಮಾರಸ್ವಾಮಿ, ಮಂಡ್ಯ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ
‘ನಿಖಿಲ್ ಎಲ್ಲಿದ್ದೀಯಪ್ಪ?’ ಎನ್ನುವ ವೀಡಿಯೊ ಕ್ಲಿಪ್ಸ್ ಕಾರಣ ಎನ್ನುವುದು ಜನರ ಅಂಬೋಣ.

---------------------

ಈ ಬಾರಿ ರಾಮಮಂದಿರ ನಿರ್ಮಾಣ ನಿಶ್ಚಿತ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಭಾರತದ ನಿರ್ಮಾಣ ಕನಸಾಗಿಯೇ ಉಳಿಯುತ್ತದೆಯೇ?

---------------------

ಅಲ್ಪಸಂಖ್ಯಾತರ ಬಗ್ಗೆ ಪ್ರಧಾನಿ ಮೋದಿಗಿರುವ ಕಾಳಜಿ ನನಗೆ ಹರ್ಷವನ್ನುಂಟುಮಾಡಿದೆ - ರೋಷನ್‌ಬೇಗ್, ಶಾಸಕ
ಅನ್ನ ಹಳಸಿದೆ, ನಾಯಿ ಹಸಿದಿದೆ.

---------------------

ಕಾಂಗ್ರೆಸ್ ಮತ್ತೆ ಪುಟಿದೇಳಲಿದೆ - ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
ಅದರೊಳಗಿರುವ ಹಿರಿಯ ನಾಯಕರು ಅದಕ್ಕೆ ಅವಕಾಶ ನೀಡಬೇಕಾಗಿದೆ.

---------------------
ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ - ರಮೇಶ್‌ಕುಮಾರ್, ವಿಧಾನ ಸಭೆ ಸಭಾಧ್ಯಕ್ಷ

ರಾಜಕೀಯ ಪಕ್ಷಗಳ ವಿಷಯ ಪಕ್ಕಕ್ಕಿರಲಿ, ದೇಶದೊಳಗೇ ಪ್ರಜಾಸತ್ತೆ ಸಾಯುವ ಹಂತದಲ್ಲಿದೆ.

---------------------

ಅಮೆರಿಕಕ್ಕೆ ಇರಾನ್‌ನಲ್ಲಿ ಸರಕಾರ ಬದಲಿಸುವ ಉದ್ದೇಶ ಇಲ್ಲ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಮತ್ತೇನನ್ನು ಬದಲಾಯಿಸುವ ಉದ್ದೇಶ ಇದೆ ಎನ್ನುವುದನ್ನು ಹೇಳಿ ಬಿಡಿ.

---------------------
ದೇಶದ ಹಿತಾಸಕ್ತಿಗಾಗಿ ಯಾವ ತ್ಯಾಗಕ್ಕೂ ಸಿದ್ಧ - ಸೋನಿಯಾ ಗಾಂಧಿ, ಕಾಂಗ್ರೆಸ್ ಮುಖ್ಯಸ್ಥೆ
ಹಾಗಾದರೆ ಕಾಂಗ್ರೆಸನ್ನು ಈಗಲಾದರೂ ಯಾಕೆ ವಿಸರ್ಜಿಸಬಾರದು?

---------------------

ನಾನು ಸಮನ್ವಯ ಸಮಿತಿ ಸೇರುವ ಕಾಲ ಸನ್ನಿಹಿತವಾಗಿದೆ - ಎಚ್.ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ
ಬಹುಶಃ ಮೈತ್ರಿ ಸರಕಾರಕ್ಕದು ರಾಹುಕಾಲ ಇರಬಹುದು.

---------------------

ಸರಕಾರದ ಪತನಕ್ಕೆ ಕಾಂಗ್ರೆಸ್ ಶಾಸಕರೇ ಗುಂಡಿ ತೋಡುತ್ತಿದ್ದಾರೆ - ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ

ಮಣ್ಣು ಹಾಕಿ ಮುಚ್ಚುವ ಪಾತ್ರಕ್ಕಾಗಿ ಕಾಯುತ್ತಿರುವಂತಿದೆ.

---------------------

ನಾನು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಬಯಸಿ ಪಡೆದದ್ದಲ್ಲ - ಶೋಭಾ ಕರಂದ್ಲಾಜೆ, ಸಂಸದೆ
ನಿಮ್ಮ ಬಗ್ಗೆ ಮತದಾರರೂ ಕೂಡ ಇದನ್ನೇ ಹೇಳುತ್ತಿದ್ದಾರೆ..

---------------------

ನಾವು (ಸಮ್ಮಿಶ್ರ ಸರಕಾರ) ಆರೋಗ್ಯವಾಗಿದ್ದು ನಮಗೆ ಆಪರೇಶ್‌ನ್‌ನ ಅಗತ್ಯವಿಲ್ಲ - ಆರ್.ವಿ.ದೇಶಪಾಂಡೆ, ಸಚಿವ
 ಕಾಂಗ್ರೆಸ್ ಉಳಿಯಬೇಕಾದರೆ ತಮ್ಮಂತಹ ಕೆಲವು ನಾಯಕರಿಗೆ ಸಣ್ಣ ಪುಟ್ಟ ಆಪರೇಶನ್ ಅಗತ್ಯವಿದೆ.

---------------------

ಭಾರತದ ಜನಸಂಖ್ಯೆ ಹೆಚ್ಚಳವನ್ನು ನಿಯಂತ್ರಿಸಲು ಮೋದಿ ಕಠಿಣ ನಿಯಮಗಳನ್ನು ತೆಗೆದುಕೊಳ್ಳಬೇಕು - ಬಾಬಾ ರಾಮ್‌ದೇವ್, ಯೋಗಗುರು
ಜನಸಂಖ್ಯೆ ಇಳಿಸಲು ಅವರು ಪತ್ನಿಯನ್ನೇ ತ್ಯಜಿಸಿರುವುದು ಸಣ್ಣ ಮಾತೇ?

---------------------

ನೆಹರೂ - ಗಾಂಧಿ ಕುಟುಂಬ ಕಾಂಗ್ರೆಸ್ ಪಾಲಿಗೆ ಮತ ಸೆಳೆಯುವ ದೊಡ್ಡ ಶಕ್ತಿಯಾಗಿದೆ - ಸಲ್ಮಾನ್‌ ಖುರ್ಷಿದ್, ಕಾಂಗ್ರೆಸ್ ಮುಖಂಡ
ಅದಕ್ಕಾಗಿ ನೆಹರೂ ಕುಟುಂಬವನ್ನು ಇನ್ನೆಷ್ಟು ಬಲಿಕೊಡಬೇಕೆಂದಿದ್ದೀರಿ?

---------------------

ಆಧುನಿಕ ಭಾರತ ನಿರ್ಮಾಣದಲ್ಲಿ ದೇಶದ ಮೊದಲ ಪ್ರಧಾನಿ ನೆಹರೂ ನೀಡಿದ ಕೊಡುಗೆಯನ್ನು ದೇಶ ಸದಾ ಕಾಲ ಸ್ಮರಿಸುತ್ತದೆ
- ನರೇಂದ್ರ ಮೋದಿ, ಪ್ರಧಾನಿ
ಹಾಗೆಯೇ ಅದನ್ನು ಹಾಳುಗೆಡವುತ್ತಿರುವ ನಿಮ್ಮನ್ನು ಕೂಡ.

---------------------

ಶೋಭಾ ಕರಂದ್ಲಾಜೆಗೆ ಪ್ರಧಾನಿ ಮೋದಿ ಗೌರವಯುತ ಸ್ಥಾನಮಾನ ನೀಡುವ ವಿಶ್ವಾಸವಿದೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಇನ್ನೂ ಆಕೆಯನ್ನು ಪಕ್ಷದೊಳಗೆ ಉಳಿಸಿಕೊಂಡಿರುವುದೇ ಮೋದಿ ಅವರಿಗೆ ನೀಡಿರುವ ಅತಿ ದೊಡ್ಡ ಕೊಡುಗೆ.

---------------------

ಅಪಾಯವನ್ನು ಗ್ರಹಿಸಿ ಇಲಿಗಳು ಹಡಗನ್ನು ತೊರೆದಂತೆ ಕೆಲವರು ಟಿಎಂ ಪಕ್ಷವನ್ನು ತೊರೆಯುತ್ತಿದ್ದಾರೆ - ಪಿರ್ಹಾದ್ ಹಕೀಂ, ಟಿಎಂ ಪಕ್ಷದ ನಾಯಕ
ಅಪಾಯವಿದೆ ಎನ್ನುವುದನ್ನು ನೀವು ಒಪ್ಪಿಕೊಂಡಿದ್ದೀರಿ ಎಂದಾಯಿತು.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...