ಕಾಬೂಲ್: ಬಸ್ಸಲ್ಲಿ ಬಾಂಬ್ ಸ್ಫೋಟ; 4 ಸಾವು

Update: 2019-06-03 18:35 GMT

ಕಾಬೂಲ್, ಜೂ. 3: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಸೋಮವಾರ ಬಸ್ಸೊಂದರಲ್ಲಿ ಬಾಂಬ್ ಸ್ಫೋಟಗೊಂಡು ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಸ್ಸಿನಲ್ಲಿ ಸರಕಾರಿ ನಿಗಾ ಸಂಸ್ಥೆಯೊಂದರ ಉದ್ಯೋಗಿಗಳು ಈದುಲ್ ಫಿತ್ರ್ ಹಬ್ಬಕ್ಕಾಗಿ ತಮ್ಮ ಮನೆಗೆ ಹೋಗುತ್ತಿದ್ದರು.

ಬಾಂಬನ್ನು ಸೈಕಲೊಂದಕ್ಕೆ ಕಟ್ಟಿ ರಸ್ತೆಯ ಬದಿಯಲ್ಲಿ ಅಡಗಿಸಿಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News