'ಗ್ರಾಮ ವಾಸ್ತವ್ಯ'ದ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಗೆ ಸಿಎಂ ಉತ್ತರಿಸಿದ್ದು ಹೀಗೆ...
Update: 2019-06-04 20:34 IST
ಬೆಂಗಳೂರು, ಜೂ.4: ನನ್ನ ಗ್ರಾಮ ವಾಸ್ತವ್ಯದ ಬಗ್ಗೆ ಬಿಜೆಪಿ ನಾಯಕರ ಕುಹಕ, ವ್ಯಂಗ್ಯ ಮತ್ತು ಟೀಕೆಗಳನ್ನು ಗಮನಿಸಿದ್ದೇನೆ. ಗ್ರಾಮ ವಾಸ್ತವ್ಯ ಮಾಡಲು ಮಾನವೀಯ ಕಳಕಳಿ, ನೈಜ ಅಂತಃಕರಣ ಇರಬೇಕು. ಗ್ರಾಮ ವಾಸ್ತವ್ಯ ಘೋಷಣೆಗೆ ಜನರಿಂದ ದೊರೆತ ಸ್ಪಂದನೆಯೇ ಬಿಜೆಪಿ ನಾಯಕರಿಗೆ ಉತ್ತರ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟರ್‌ನಲ್ಲಿ ತಿರುಗೇಟು ನೀಡಿದ್ದಾರೆ.