×
Ad

ಚಾಮರಾಜನಗರ: ಸಂಭ್ರಮದ ಈದುಲ್ ಫತ್ರ್ ಆಚರಣೆ

Update: 2019-06-05 21:05 IST

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ ಮುಸ್ಲಿಮರು ಈದುಲ್ ಫತ್ರ್ ಅನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ವಿವಿಧ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಮಕ್ಕಳು, ಯುವಕರು ಹಾಗೂ ಮುಖಂಡರು ಪ್ರಮುಖ ಬೀದಿಗಳಲ್ಲಿ ಶುಭ್ರ ಶ್ವೇತ ವಸ್ತ್ರಧರಿಸಿ ಪರಸ್ಪರ ಆಲಂಗಿಸಿ ಶುಭಹಾರೈಸುತ್ತಾ ಮೆರವಣಿಗೆ ಮೂಲಕ ಸಾಗಿ ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡರು. 

ಧರ್ಮಗುರುಗಳಾದ ಮೌಲಾನ ಜಾಬೀರ್, ಮೌಲಾನಾ ಸಿರಾಜುದ್ದೀನ್ ಅವರು ಪ್ರವಚನ ನೀಡಿದರು. ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಮುಖಂಡರು ಹಾಗೂ ಜನಾಂಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News