ವಿಷ ಹಾಕಿದ ದುಷ್ಕರ್ಮಿಗಳು: 70ಕ್ಕೂ ಹೆಚ್ಚು ಕೋಳಿಗಳ ಸಾವು

Update: 2019-06-05 18:23 GMT

ಮಂಡ್ಯ, ಜೂ.5: ಕೆ.ಎಂ.ದೊಡ್ಡಿ ಸಮೀಪದ ಮಾದರಹಳ್ಳಿ ಗ್ರಾಮದಲ್ಲಿ ದುಷ್ಕರ್ಮಿಗಳು ವಿಷ ಹಾಕಿದ ಪರಿಣಾಮ 70ಕ್ಕೂ ಹೆಚ್ಚು ನಾಟಿ ಕೋಳಿಗಳು ಮೃತಪಟ್ಟಿವೆ ಎನ್ನಲಾಗಿದೆ. 

ಗ್ರಾಪಂ ಸದಸ್ಯ ಉಮೇಶ್ ಎಂಬುವರ ನಾಟಿ ಕೋಳಿ ಫಾರಂನಲ್ಲಿ ಕೋಳಿಗಳ ಸಾವು ಸಂಭವಿಸಿದ್ದು, ಕೋಳಿ ಫಾರಂನಿಂದ ಹೊರಗೆ ಬಿಟ್ಟು ಮೇಯಿಸಲಾಗುತ್ತಿತ್ತು. ಮಂಗಳವಾರ ಮಧ್ಯಾಹ್ನ ಉಮೇಶ್ ಸೇರಿದಂತೆ ಫಾರಂ ನೋಡಿಕೊಳ್ಳುವವರು, ಎದುರುಗಡೆಯ ಆಲೆಮನೆಯವರು ಮದ್ದೂರು ತಾಲೂಕಿನ ತೊರೆಚಾಕನಹಳ್ಳಿಗೆ ಬೀಗರ ಔತಣಕೂಟಕ್ಕೆ ತೆರಳಿದ್ದಾಗ ಈ ಕೃತ್ಯವೆಸಗಲಾಗಿದೆ ಎನ್ನಲಾಗಿದೆ.

ಈ ವೇಳೆ ಬಂದ ದುಷ್ಕರ್ಮಿಗಳು ವಿಷ ಹಾಕಿ, ಫಾರಂನ ಬಾಗಿಲು ತೆಗೆದು ಹೋಗಿದ್ದಾರೆ. ವಿಷ ಸೇವನೆ ಮಾಡಿದ 70ಕ್ಕೂ ಹೆಚ್ಚು ಕೋಳಿಗಳು ಅಕ್ಕಪಕ್ಕದ ಜಮೀನು, ತೋಟಗಳಿಗೆ ತೆರಳಿ ಅಲ್ಲಿಯೇ ಸತ್ತು ಬಿದ್ದಿದ್ದು, ಕೆಲವು ಕೋಳಿಗಳನ್ನು ನಾಯಿಗಳು ಎಳೆದೊಯ್ದು ತಿಂದು
ಹಾಕಿವೆ.

ಸುಮಾರು 2 ತಿಂಗಳ ವಯಸ್ಸಿನ ಕೋಳಿಗಳು ಮೃತಪಟ್ಟಿದ್ದು, ಸಾವಿರಾರು ರೂ.ನಷ್ಟವಾಗಿದೆ ಎಂದು ಉಮೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News