"ಅಭಿವೃದ್ಧಿಗೆ ನಾವು ಬೇಕು, ಮತ ಹಾಕಲು ಅವರು ಬೇಕಾ ?"
Update: 2019-06-08 23:22 IST
ಮಂಡ್ಯ, ಜೂ.8: ಲೋಕಸಭಾ ಚುನಾವಣಾ ಪ್ರಚಾರ ವೇಳೆ ಮತದಾರರ ವಿರುದ್ಧ ಹರಿಹಾಯ್ದಿದ್ದ ಮದ್ದೂರು ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮತ್ತೆ ಮತದಾರರ ವಿರುದ್ಧ ಕಿಡಿಕಾರಿದ್ದಾರೆ.
ಮೈತ್ರಿ ಅಭ್ಯರ್ಥಿ ನಿಖಿಲ್ ಬೆಂಬಲಿಸುತ್ತಿಲ್ಲವೆಂಬ ಕಾರಣಕ್ಕೆ ಚುನಾವಣೆ ವೇಳೆ ಟೀಕಿಸಿ ಮತದಾರರ ಕೆಂಗಣ್ಣಿಗೆ ಗುರಿಯಾಗಿದ್ದ ತಮ್ಮಣ್ಣ, ಮದ್ದೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ವೇಳೆ ಮತದಾರರ ಮೇಲೆ ಮತ್ತೆ ಹರಿಹಾಯ್ದಿದ್ದಾರೆ.
'ಇನ್ನೇನು ಜೋಡೆತ್ತುಗಳು ಬರುತ್ತವೆ, ಕರೆದು ಹತ್ತಿಸಿಕೊಳ್ಳಿ. ನಾನು ಅಭಿವೃದ್ಧಿ ಪರವಾಗಿ ಕೆಲಸ ಮಾಡಿದ್ದೀನಿ. ನೀವು ಅದನ್ನು ನೆನೆಪಿಸಿಕೊಂಡಿದ್ದೀರಾ ? ಈಗ ಬಂದು ಮಾತನಾಡುತ್ತೀರಿ. ಅಭಿವೃದ್ಧಿಗೆ ನಾವು ಬೇಕು. ಮತ ಹಾಕುವುದು ಅವರಿಗಾ ಎಂದು ಸಮಸ್ಯೆ ಹೇಳಲು ಬಂದ ಮುಖಂಡರು ಹಾಗೂ ಸಾರ್ವಜನಿಕರ ವಿರುದ್ಧ ತಮ್ಮಣ್ಣ ಕಿಡಿಕಾರಿದ್ದಾರೆ.