×
Ad

ಸಿಡಿಲು ಬಡಿದು ಸಾವು ಪ್ರಕರಣ: ಕುಟುಂಬದ ಸದಸ್ಯರಿಗೆ ಚೆಕ್ ವಿತರಣೆ

Update: 2019-06-08 23:54 IST

ಕಲಬುರಗಿ, ಜೂ. 8: ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಮಾಡಬೂಳ ತಾಂಡಾದಲ್ಲಿ ಇತ್ತೀಚಿಗೆ ಸಿಡಿಲು ಬಡಿದು ಸಾವನ್ನಪ್ಪಿದ ಮೂವರ ಕುಟುಂಬದ ಸದಸ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಿ ಶನಿವಾರ ಸಾಂತ್ವಾನ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮೃತರ ಕುಟುಂಬ ವರ್ಗದವರಿಗೆ ತಲಾ 5 ಲಕ್ಷ ರೂ. ಪರಿಹಾರದ ಚೆಕ್ ಅನ್ನು ವಿತರಿಸಿದರು. ಮೃತರ ಕುಟುಂಬ ವರ್ಗದವರಿಗೆ ಆಶ್ರಯ ಯೋಜನೆಯಡಿಯಲ್ಲಿ ಮನೆ ಮಂಜೂರು ಮಾಡುವಂತೆ ಸ್ಥಳದಲ್ಲಿ ಇದ್ದ ಚಿತ್ತಾಪುರ ತಹಶೀಲ್ದಾರ್ ಅವರಿಗೆ ಪ್ರಿಯಾಂಕ್ ಖರ್ಗೆ ಸೂಚಿಸಿದರು. ಗೇಮು ತಂದೆ ಶಂಕ್ರು, ಸುರೇಶ್ ತಂದೆ ಮಾನಸಿಂಗ್ ಹಾಗೂ ಯುವರಾಜ್ ತಂದೆ ಗೇಮು ಈ ಮೂವರು ಇತ್ತೀಚಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದರು ಎಂದು ಪ್ರಿಯಾಂಕ್ ಖರ್ಗೆ ಅವರ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News