ರಾಜ್ಯದಲ್ಲಿ ಮುಂಗಾರು ಪ್ರವೇಶ ಮೂರು ದಿನ ತಡ ಸಾಧ್ಯತೆ

Update: 2019-06-09 17:19 GMT

ಬೆಂಗಳೂರು, ಜೂ.9: ರಾಜ್ಯದಲ್ಲಿ ಮುಂಗಾರು ಪ್ರವೇಶ ಮೂರು ದಿನಗಳ ಕಾಲ ತಡವಾಗಬಹುದು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಹೇಳಿದ್ದಾರೆ.

ಶನಿವಾರ ಕೇರಳದ ಕರಾವಳಿಯಲ್ಲಿ ಮುಂಗಾರು ಪ್ರವೇಶಿಸಿದ್ದರೂ ಅಲ್ಲಿ ದೊಡ್ಡ ಪ್ರಮಾಣದ ಮಳೆಯಾಗದೇ ದುರ್ಬಲವಾಗಿದೆ. ಈ ನಡುವೆ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಕಂಡಿದ್ದು, ಗುಜರಾತ್ ಕಡೆಗೆ ಸಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಾಯುಭಾರ ಕುಸಿತ ಪ್ರಬಲಗೊಂಡು ಚಂಡಮಾರುವಾತಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ. ಒಂದು ವೇಳೆ ಹಾಗಾದರೆ ಮುಂಗಾರು ಮತ್ತಷ್ಟು ದುರ್ಬಲವಾಗುವ ಸಾಧ್ಯತೆಯಿದೆ. ಕರಾವಳಿ ಭಾಗದಲ್ಲಿ ಮಾತ್ರ ಮಳೆಯಾಗಲಿದ್ದು, ಪೂರ್ವ ಮುಂಗಾರು ಸಹ ರಾಜ್ಯದಲ್ಲಿ ದುರ್ಬಲಗೊಂಡಿದೆ. ಕೆಲಕಡೆ ಚದುರಿದಂತೆ ಸಾಧಾರಣ ಮಳೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಂದು ವಾರಗಳ ಕಾಲ ಮುಂಗಾರು ತಡವಾಗಿದೆ. ಈ ವೇಳೆಗಾಗಲೇ ಮುಂಗಾರು ರಾಜ್ಯ ಪ್ರವೇಶಿಸಬೇಕಿತ್ತು. ರಾಜ್ಯದಲ್ಲಿಯೂ ಉತ್ತಮ ಮಳೆಯಾಗಬೇಕಿತ್ತು. ಪೂರ್ವ ಮುಂಗಾರು ಮಳೆಯೂ ನಿರೀಕ್ಷಿತ ಪ್ರಮಾಣದಲ್ಲಿ ಬರಲಿಲ್ಲ. ಮುಂಗಾರು ಚೇತರಿಕೆಗೊಳ್ಳುವವರೆಗೂ ಉತ್ತಮ ಮಳೆ ನಿರೀಕ್ಷೆಯ ಸಾಧ್ಯತೆಯಿಲ್ಲ ಎಂದು ಅವರು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News