×
Ad

ಸವಿ ಸವಿ ನೆನಪು...

Update: 2019-06-09 23:45 IST

ವಯನಾಡ್‌ಗೆ ಮೂರು ದಿನಗಳ ಭೇಟಿಯ ಕೊನೆಯ ದಿನವಾದ ರವಿವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅವರ ಜನನದ ಸಂದರ್ಭ ಇದ್ದು ಎತ್ತಿಕೊಂಡಿದ್ದ ನಿವೃತ್ತ ದಾದಿ ರಾಜಮ್ಮಾ ವಾವಾಥಿಲ್ ರವಿವಾರ ಭೇಟಿಯಾದರು. ಈ ಸಂದರ್ಭ ರಾಹುಲ್ ಗಾಂಧಿ ಅವರು ರಾಜಮ್ಮಾ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡರು. ದಿಲ್ಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ 1970 ಜೂನ್ 19ರಂದು ರಾಹುಲ್ ಗಾಂಧಿ ಜನಿಸಿದಾಗ ರಾಜಮ್ಮಾ ಕರ್ತವ್ಯದಲ್ಲಿದ್ದರು. ಆನಂತರ ವಿಆರ್‌ಎಸ್ ತೆಗೆದುಕೊಂಡ ಅವರು 1987ರಲ್ಲಿ ಕೇರಳಕ್ಕೆ ಹಿಂದಿರುಗಿದರು. ಈಗ ಅವರು ವಯನಾಡ್‌ನ ಸುಲ್ತಾನ್ ಬತ್ತೇರಿ ಸಮೀಪದ ಕಲ್ಲೂರ್‌ನಲ್ಲಿ ವಾಸಿಸುತ್ತಿದ್ದಾರೆ. ಕಳೆದ ಮೇಯಲ್ಲಿ ರಾಹುಲ್ ಗಾಂಧಿ ಅವರ ಪೌರತ್ವದ ಬಗ್ಗೆ ವಿವಾದ ಎದ್ದಾಗ ರಾಜಮ್ಮಾ ಅವರು ರಾಹುಲ್ ಜನಿಸಿದಾಗ ತಾನು ಎತ್ತಿಕೊಂಡಿರುವುದಾಗಿ ಹೇಳುವ ಮೂಲಕ ಪತ್ರಿಕೆಗಳ ಹೆಡ್‌ಲೈನ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor