ಕ್ರಿಕೆಟ್ ವೀಕ್ಷಣೆಗೆ ಆಗಮಿಸಿದ ವಿಜಯ್ ಮಲ್ಯ ವಿರುದ್ಧ ‘ಚೋರ್ ಹೈ’ ಘೋಷಣೆ

Update: 2019-06-10 06:37 GMT

ಲಂಡನ್,ಜೂ.10: ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ 9 ಸಾವಿರ ಕೋಟಿ ರೂ. ಸಾಲ ಮರು ಪಾವತಿಸದೆ ಲಂಡನ್ ನಲ್ಲಿ ತಲೆಮೆರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧ ದಿ ಓವಲ್ ಕ್ರಿಕೆಟ್ ಕ್ರೀಡಾಂಗಣದ ಬಳಿ ಕ್ರಿಕೆಟ್ ಅಭಿಮಾನಿಗಳು 'ಚೋರ್ ಹೈ '(ಕಳ್ಳ) ಘೋಷಣೆ ಕೂಗಿದ ಘಟನೆ ರವಿವಾರ ರಾತ್ರಿ ನಡೆದಿದೆ.

ವಿಜಯ್ ಮಲ್ಯ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡಿ ಕ್ರೀಡಾಂಗಣದ ಗೇಟ್ ನ ಮೂಲಕ ವಾಪಸಾಗುತ್ತಿದ್ದಾಗ ಅವರನ್ನು ಸುತ್ತುವರಿದ ಕ್ರಿಕೆಟ್ ಅಭಿಮಾನಿಗಳು  ಅವರ ವಿರುದ್ಧ ಘೋಷಣೆ ಕೂಗಿದ್ದಾರೆ. ಇದರಿಂದ ಮಲ್ಯ ಮುಜುಗರದ ಸನ್ನಿವೇಶವನ್ನು ಎದುರಿಸಿದರು.

ಮಲ್ಯ ಜೊತೆ ಅವರ ಜೊತೆ ತಾಯಿ ಲಲಿತಾ ಮತ್ತು ಆಪ್ತರು ಇದ್ದರು.  ಈ ಸಂದರ್ಭದಲ್ಲಿ ಸುದ್ದಿ ಸಂಸ್ಥೆಯ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು “ ನನ್ನ ತಾಯಿಯನ್ನು  ನೋಯಿಸುವುದಿಲ್ಲ  ಎಂಬುದನ್ನು ದೃಢಪಡಿಸುತ್ತೇನೆ’’  ಎಂದರು.

ಇದಕ್ಕೂ ಮೊದಲು ಮಲ್ಯ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರು ಅವರನ್ನು ಪ್ರಶ್ನಿಸಿದಾಗ “ ನಾನು ಕ್ರಿಕೆಟ್ ವೀಕ್ಷಣೆಗೆ ಬಂದಿದ್ದೇನೆ. ಜುಲೈನಲ್ಲಿ ನಡೆಯಲಿರುವ ಮುಂದಿನ ವಿಚಾರಣೆಗೆ ಸಂಬಂಧಿಸಿ ಸಿದ್ಧತಾ ಕಾರ್ಯಗಳು ನಡೆಯುತ್ತಿದೆ '’ ಎಂದು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News