×
Ad

ಅಂತರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ ಶಿಪ್: ಕೊಡಗಿನ ವಿದ್ಯಾರ್ಥಿಗಳು ಆಯ್ಕೆ

Update: 2019-06-10 17:45 IST

ಮಡಿಕೇರಿ ಜೂ.10 : ವರ್ಲ್ಡ್ ಟೆಕ್ವಾಂಡೋ ಫೆಡರೇಶನ್ ವತಿಯಿಂದ ಹೈದರಾಬಾದ್‍ನ ವಿಜಯಭಾಸ್ಕರ್ ರೆಡ್ಡಿ ಒಳಾಂಗಣ ಕ್ರೀಡಾಂಗಣದಲ್ಲಿ ಜೂ.11 ರಿಂದ 16ರ ವರೆಗೆ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಟೆಕ್ವಾಂಡೋ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಇಬ್ಬರು ವಿದ್ಯಾರ್ಥಿಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. 

ಮಡಿಕೇರಿ ನಿವಾಸಿ ಎಂ.ಆರ್.ಜಗದೀಶ್ ಮತ್ತು ಪ್ರಿಯದರ್ಶಿನಿ ದಂಪತಿ ಪುತ್ರ ಕೊಡಗು ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿ ಎಂ.ಜೆ.ಅಕ್ಷಯ ಹಾಗೂ ಮಡಿಕೇರಿಯ ನಿವಾಸಿ ಶೇಷಗಿರಿ ಮತ್ತು ಭಾಗೀರಥಿ ದಂಪತಿಗಳ ಪುತ್ರಿ ಚೇತನಾಶ್ರೀ ಕೆಡೆಟ್ ವಿಭಾಗದ ಚಾಂಪಿಯನ್‍ಶಿಪ್‍ನಲ್ಲಿ ಪಾಲ್ಗೊಳ್ಳುವ ಹಂತಕ್ಕೆ ತಲುಪಿ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈ ಇಬ್ಬರು ವಿದ್ಯಾರ್ಥಿಗಳು ಮರ್ಕರಾ ಟೆಕ್ವಾಂಡೊ ಕ್ಲಬ್‍ನ ಮಾಸ್ಟರ್ ಕುಶಾಲ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಚಾಂಪಿಯನ್ ಶಿಪ್‍ನಲ್ಲಿ ವಿಜೇತರಾದವರು ಏಷ್ಯನ್ ಗೇಮ್ಸ್ ರ‍್ಯಾಕಿಂಗ್‌ನ ಆಯ್ಕೆಪಟ್ಟಿಯಲ್ಲಿ ಅರ್ಹತೆ ಪಡೆಯಲಿದ್ದಾರೆ ಎಂದು ಕುಶಾಲ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News