×
Ad

ಸಾವಿನ ಸಂಭ್ರಮ ಕೊಲೆಯಷ್ಟೇ ಘೋರ ಕೃತ್ಯ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-06-11 20:05 IST

ಬೆಂಗಳೂರು, ಜೂ.11: ಸಾವಿನ ಸಂಭ್ರಮ ಕೊಲೆಯಷ್ಟೇ ಘೋರ ಕೃತ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಗಿರೀಶ್ ಕಾರ್ನಾಡ್ ಅವರ ಸಾವಿನಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ವಿಕೃತಿ ಮೆರೆದವರ ವಿರುದ್ಧ ಮಂಗಳವಾರ ಟ್ವಿಟ್ ಮಾಡಿರುವ ಅವರು, ಸಾವಿನ ಸಂಭ್ರಮ ಕೊಲೆಯಷ್ಟೇ ಘೋರ ಕೃತ್ಯ. ಅದು ಕಾರ್ನಾಡರದ್ದಾಗಲಿ, ಕಾಂಗ್ರೆಸ್‌ನದ್ದಾಗಲಿ ಅಥವಾ ಬಿಜೆಪಿಯವರದ್ದಾಗಲಿ. ಸೈದ್ಧಾಂತಿಕ ವಿರೋಧಕ್ಕಾಗಿ ಯಾರೂ ಸಂಭ್ರಮಿಸುವಂತ ಶತ್ರುಗಳಾಗಬಾರದು ಎಂದು ಹೇಳಿದ್ದಾರೆ.

ಬಿತ್ತಿದ್ದನ್ನೇ ಫಸಲಾಗಿ ಪಡೆಯುತ್ತೇವೆ. ಹಾಗಾಗಿ ಬಿತ್ತುವುದಾದರೆ ಮಾನವೀಯತೆ ಮತ್ತು ಸೌಹಾರ್ದತೆಯನ್ನು ಬಿತ್ತೋಣ ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News