ನೈಸರ್ಗಿಕ ವಿಕೋಪ: ವದಂತಿಗಳಿಗೆ ಕಿವಿಗೊಡದಂತೆ ಕೊಡಗು ಜಿಲ್ಲಾಧಿಕಾರಿ ಮನವಿ

Update: 2019-06-11 17:59 GMT

ಮಡಿಕೇರಿ, ಜೂ.11: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹವಾಮಾನದ ಬದಲಾವಣೆ ಕುರಿತು ನಿರಂತರ ನಿಗಾವಹಿಸಿದ್ದು, ಭಾರೀ ಮಳೆ ಅಥವಾ ನೈಸರ್ಗಿಕ ವಿಕೋಪದ ಮನ್ಸೂಚನೆ ಇದ್ದಲ್ಲಿ ಜಿಲ್ಲಾಡಳಿತ ಅಧಿಕೃತವಾಗಿ ಮಾಹಿತಿ ನೀಡಲಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗಬಾರದೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಜೂ.13ರವರೆಗೆ ಭಾರೀ ಮಳೆ ಮತ್ತು ಗಾಳಿ ಇರಲಿದೆಯೆಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ಜೂ.14 ರಿಂದ 20ರವರೆಗೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆಯಾದರೂ, ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಜೂ.20 ರ ನಂತರ ಜಿಲ್ಲೆಯಲ್ಲಿ ಮತ್ತೆ ಮುಂಗಾರುಮಳೆ ಚುರುಕುಗೊಳ್ಳಲಿದ್ದು, ಸಾರ್ವಜನಿಕರು ಯಾವುದೇ ಪ್ರಾಕೃತಿ ವಿಕೋಪ ಸಮಸ್ಯೆಗಳು ಎದುರಾದಲ್ಲಿ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ- ಕಂಟ್ರೋಲ್ ರೂಂ 1077, ವಾಟ್ಸ್ ಅಪ್ ನಂಬರ್ 8550001077.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News