ಹನೂರು: ಹೋಟಲ್, ಬೇಕರಿಗಳಿಗೆ ಆರೋಗ್ಯ ಅಧಿಕಾರಿಗಳ ಭೇಟಿ; ಸ್ವಚ್ಚತೆ ಕಾಪಾಡಲು ಸೂಚನೆ

Update: 2019-06-11 18:07 GMT

ಹನೂರು, ಜೂ.11: ಪಟ್ಟಣದಲ್ಲಿನ ಹೋಟಲ್ ಬೇಕರಿ ಮತ್ತು ತಿಂಡಿ ತಿನಿಸು ಮಾರಾಟ ಮಾಡುವ ಸ್ಥಳಗಳಿಗೆ ಪಟ್ಟಣ ಪಂ. ಆರೋಗ್ಯ ಅಧಿಕಾರಿಗಳು ದಾಳಿ ಮಾಡಿ ಸ್ವಚ್ಚತೆ ಬಗ್ಗೆ ತೀವ್ರ ತರಾಟೆ ತೆಗೆದುಕೊಂಡರು. 

ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿ ರಾಘವೇಂದ್ರ ಸ್ವಚ್ಚತಾ ಕ್ರಮಗಳ ಬಗ್ಗೆ ನಿಗಾ ವಹಿಸಲು ಸೂಚಿಸಿದರು. ಅಗತ್ಯ ಸ್ವಚ್ಚತಾ ಕ್ರಮಗಳನ್ನು ಕೈಗೊಳ್ಳಲು  ವಿಫಲವಾದರೆ ಪರವಾನಗಿ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು.

ಕೆಲ ಹೋಟೆಲ್‍ಗಳಲ್ಲಿ ಪದಾರ್ಥಗಳು ಮತ್ತು ಕುಡಿಯುವ ನೀರು ಇಡುವ ಜಾಗಗಳಲ್ಲಿ ಮಾಲಿನ್ಯ ಕಂಡು ಮಾಲಕರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿ ಹೋಟಲ್‍ನಲ್ಲಿಯೂ ಶುಚಿತ್ವ ಕಾಪಾಡಬೇಕು, ಜನರಿಗೆ ಶುದ್ದ ಕುಡಿಯುವ ನೀರು ವ್ಯವಸ್ಥೆ ಮಾಡಬೇಕು. ರುಚಿ, ಶುಚಿಯಾದ ತಿಂಡಿ ತಿನಿಸು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಪ.ಪಂ ಅಧಿಕಾರಿ ಮನಿಯಾ, ಸಿಬ್ಬಂದಿಗಳಾದ ಕೆಂಪರಾಜು, ಶಂಬೇಗೌಡ, ಮಾದೇಶ್, ಸಿದ್ದರಾಜು, ಅರಸು ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News