ಪ್ರೊಫೆಸರ್ ಮನೆ ಸೇರಿ ಹಲವು ಕಡೆ ಎಸಿಬಿ ದಾಳಿ

Update: 2019-06-12 17:11 GMT

ಬೆಂಗಳೂರು, ಜೂ.12: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕುಲ ಸಚಿವರಾಗಿದ್ದ, ಸದ್ಯ ರಸಾಯನಶಾಸ್ತ್ರದ ಪ್ರೊಫೆಸರ್ ಆಗಿರುವ ಕಲ್ಲಪ್ಪ ಎಂ.ಹೊಸಮನಿ ಸೇರಿ ಹಲವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಆಸ್ತಿ ಸಂಬಂಧ ಕೆಲ ದಾಖಲೆ ಜಪ್ತಿ ಮಾಡಿದ್ದಾರೆ. 

ಉತ್ತರ ಕನ್ನಡ ಜೊಯ್ಡಾ ಉಪ ವಲಯದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಉದಯ್ ಡಿ.ಚಬ್ಬಿ ಹಾಗೂ ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಹಾಯಕ ಅಭಿಯಂತರ ಮಹದೇವಪ್ಪ ಅವರ ನಿವಾಸದ ಮೇಲೂ ದಾಳಿ ನಡೆದಿದೆ.

ಪ್ರೊಫೆಸರ್ ಮನೆ: ಧಾರವಾಡದ ಶ್ರೀನಗರದಲ್ಲಿರುವ ಕಲ್ಲಪ್ಪ ಎಂ.ಹೊಸಮನಿ ಮನೆ ಹಾಗೂ ಗುಲಗಂಜಿಕೊಪ್ಪದಲ್ಲಿರುವ ಸಂಬಂಧಿಕರ ನಿವಾಸದ ಮೆಲೆ ದಾಳಿ ನಡೆಸಿ ಕೆಲ ಮಹತ್ವದ ದಾಖಲೆ ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗಷ್ಟೇ, ಕಲ್ಲಪ್ಪ ಎಂ.ಹೊಸಮನಿ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅವರನ್ನು ಕುಲಸಚಿವ ಸ್ಥಾನದಿಂದ ವಜಾಗೊಳಿಸಿತ್ತು.

ಮಹದೇವಪ್ಪ, ಅವರ ಬೆಂಗಳೂರಿನ ಯಶವಂತಪುರದ ಸಿದ್ದೇಹಳ್ಳಿಯಲ್ಲಿರುವ ನಿವಾಸ, ಮಂಗಳೂರಿನ ಕದ್ರಿಪಾಡೆಯಲ್ಲಿರುವ ನಿವಾಸ, ಚಿತ್ರದುರ್ಗದ ಕಣಿವೆ ಹಳ್ಳಿಯಲ್ಲಿರುವ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉದಯ್ ಡಿ.ಚಬ್ಬಿ: ಬೆಳಗಾವಿ ಹಾಗೂ ದಾಂಡೇಲಿಯಲ್ಲಿರುವ ಇವರ ನಿವಾಸ ಹಾಗೂ ಎರಡು ಕಚೇರಿಗಳ ಮೇಲೆ ಎಸಿಬಿ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಇವರು ಭ್ರಷ್ಟಾಚಾರದಲ್ಲಿ ತೊಡಗಿುವ ಬಗ್ಗೆ ಆರೋಪ ಕೇಳಿ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News