ಎಸಿಬಿ ದಾಳಿ ಪ್ರಕರಣ: ಪ್ರೊಫೆಸರ್ ಬಳಿ ಲಕ್ಷಾಂತರ ಮೌಲ್ಯದ ಆಸ್ತಿ ಪತ್ತೆ

Update: 2019-06-13 15:45 GMT

ಬೆಂಗಳೂರು, ಜೂ.13: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕುಲ ಸಚಿವರಾಗಿದ್ದ, ಸದ್ಯ ರಸಾಯನಶಾಸ್ತ್ರದ ಪ್ರ್ರೊಫೆಸರ್ ಆಗಿರುವ ಕಲ್ಲಪ್ಪ ಎಂ.ಹೊಸಮನಿ ಸೇರಿ ಹಲವರ ಮನೆ ಮೇಲೆ ಎಸಿಬಿ ದಾಳಿ ಪ್ರಕರಣ ಸಂಬಂಧ ಲಕ್ಷಾಂತರ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಪ್ರೊಫೆಸರ್: ಕಲ್ಲಪ್ಪಎಂ.ಹೊಸಮನಿ, ಅವರ ಕುಟುಂಬಸ್ಥರ ಹೆಸರಿನಲ್ಲಿ ಧಾರವಾಡದಲ್ಲಿ 1 ಮನೆ, 1 ನಿವೇಶನ, ವಿವಿಧ ಸ್ಥಳಗಳಲ್ಲಿ ಒಟ್ಟು 40 ಎಕರೆ ಕೃಷಿ ಭೂಮಿ, 200 ಗ್ರಾಂ ಚಿನ್ನ, 1.148 ಕೆಜಿ ಬೆಳ್ಳಿ, 2 ಕಾರು, ಬೈಕ್ ಎರಡು, 1 ಟ್ರ್ಯಾಕ್ಟರ್, 15 ಲಕ್ಷ ಠೇವಣಿಗಳು, ವಿಮೆ ಪಾಲಿಸಿಗಳು ಹಾಗೂ 17 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಗಣಿ ಮತ್ತು ಭೂಜ್ಞಾನ ಇಲಾಖೆ ಮಂಗಳೂರು ವಿಭಾಗದ ಇಇ ಮಹದೇವಪ್ಪ ಅವರ ಕುಟುಂಬಸ್ಥರ ಹೆಸರಿನಲ್ಲಿ ಬೆಂಗಳೂರಿನ ಯಶವಂತಪುರದಲ್ಲಿ ಒಂದು ಮನೆ, 1 ನಿವೇಶನ, ಹೆಸರಘಟ್ಟ ಹೋಬಳಿಯಲ್ಲಿ 1 ನಿವೇಶನ, ಚಿಕ್ಕಮಗಳೂರಿನಲ್ಲಿ 15 ಎಕರೆ ಹಾಗೂ ಚಿತ್ರದುರ್ಗಾದಲ್ಲಿ 3 ಎಕರೆ ಕೃಷಿ ಭೂಮಿ.

112 ಗ್ರಾಂ ಚಿನ್ನ, 4.4 ಕೆಜಿ ಬೆಳ್ಳಿ, ಕಾರು, ಬೈಕ್, 3.11 ಲಕ್ಷ ನಗದು, ಬ್ಯಾಂಕ್ ಖಾತೆಯಲ್ಲಿ 6.49 ಲಕ್ಷ ನಗದು ಹಾಗೂ 12 ಲಕ್ಷ ಠೇವಣಿಗಳು, 2,150 ಯುಎಸ್ ಡಾಲರ್‌ಗಳು, 4,800 ಹಾಂಗ್‌ಕಾಂಗ್ ಡಾಲರ್‌ಗಳು ಮತ್ತು 5 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.

ಉತ್ತರ ಕನ್ನಡದ ಜ್ಯೋಡಾ ಸಬ್‌ಡಿವಿಷನ್, ಪಿಡಬ್ಲ್ಯೂಡಿ ಎಇಇ, ಉದಯ ಡಿ.ಚಬ್ಬಿ ಅವರ ಕುಟುಂಬಸ್ಥರ ಹೆಸರಿನಲ್ಲಿ 3 ಮನೆ, 300 ಗ್ರಾಂ ಚಿನ್ನ, ಒಂದು ಕಾರು, ಬೈಕ್, 11 ಲಕ್ಷ ನಗದು, ಬ್ಯಾಂಕ್ ಖಾತೆಯಲ್ಲಿ 31.43 ಲಕ್ಷ ಹಾಗೂ 2 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News