ಭೂಮಿಗೆ ಖಾತೆ ಮಾಡಿಕೊಡಲು ವಿಳಂಬ: ಕನಕಪುರ ತಹಶೀಲ್ದಾರ್ ಅಮಾನತಿಗೆ ಹೈಕೋರ್ಟ್ ಆದೇಶ

Update: 2019-06-13 17:36 GMT

ಬೆಂಗಳೂರು, ಜೂ.13: ರೈತನಿಗೆ ಸರಕಾರದಿಂದ ಮಂಜೂರಾದ ಭೂಮಿಗೆ ಖಾತೆ ಮಾಡಿಕೊಡದ ವಿಚಾರಕ್ಕೆ ಸಂಬಂಧಿಸಿದಂತೆ ಕನಕಪುರ ತಹಶೀಲ್ದಾರ್ ಆನಂದಯ್ಯ ಅಮಾನತಿಗೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ.   

ಮಂಜೂರಾದ ಭೂಮಿಗೆ ಖಾತೆ ಮಾಡಿಕೊಡದ ಹಿನ್ನೆಲೆಯಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. 1984ರಲ್ಲಿ ಕನಕಪುರದ ರೈತ ವೆಂಕಟೇಶ್‌ಗೆ ಸರಕಾರ 1 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಈ ಭೂಮಿಗೆ ಖಾತೆ ಮಾಡಿಕೊಡುವಂತೆ ವೆಂಕಟೇಶ್, ಕನಕಪುರ ತಹಶೀಲ್ದಾರ್‌ಗೆ ಅರ್ಜಿ ಹಾಕಿದ್ದರು. ಆದರೆ, ಆನಂದಯ್ಯ ಅವರು ಹಲವು ಕಾರಣಗಳನ್ನು ನೀಡಿ ಖಾತೆ ಮಾಡಿಕೊಡಲು ವಿಳಂಬ ನೀತಿ ಅನುಸರಿಸಿದ್ದರು. ಹೀಗಾಗಿ, ರೈತ ವೆಂಕಟೇಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಪೀಠವು ತಹಶೀಲ್ದಾರ್ ವಿರುದ್ಧ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಳ್ಳಲು ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಸೂಚಿಸಿದರಲ್ಲದೇ, ತಹಶೀಲ್ದಾರ್ ಅವರನ್ನು ಅಮಾನತುಗೊಳಿಸಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News