ಶಾಸಕ ಶಾಮನೂರು ಶಿವಶಂಕರಪ್ಪ ಜನ್ಮದಿನ: ಶುಭಾಶಯ ಕೋರಿದ ಗಣ್ಯರು

Update: 2019-06-16 12:54 GMT

ದಾವಣಗೆರೆ, ಜೂ.16: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಶಾಸಕ ಶಾಮನೂರು ಶಿವಶಂಕರಪ್ಪ 88ನೇ ವರ್ಷ ಪೂರೈಸಿ 89ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಗಣ್ಯರು ಶುಭಾಶಯ ಕೋರಿದರು.

ಬೆಳಗಿನಿಂದಲೂ ಗಣ್ಯರು ಅವರ ನಿವಾಸಕ್ಕೆ ಆಗಮಿಸಿ ಶುಭ ಕೋರಿದರು. ಎಸ್.ಎಸ್. ಅವರ ಮಕ್ಕಳಾದ ಮಂಜುಳಾ, ಶೈಲಜಾ, ಸುಧಾ, ಮೀನಾ ಹಾಗೂ ಎಸ್.ಎಸ್.ಗಣೇಶ್, ಎಸ್.ಎಸ್.ಬಕ್ಕೇಶ್, ಡಾ.ಎಸ್.ಬಿ.ಮುರುಗೇಶ್ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರುಗಳು, ಸಂಬಂಧಿಕರು ಶುಭಾಶಯ ತಿಳಿಸಿದರು. ವಿದೇಶ ಪ್ರವಾಸದಲ್ಲಿರುವ ಎಸ್.ಎಸ್.ಮಲ್ಲಿಕಾರ್ಜುನ್ ದಂಪತಿಗಳು, ಮಕ್ಕಳು ದೂರವಾಣಿ ಮೂಲಕ ಶುಭಾಶಯ ತಿಳಿಸಿದರು.

ಕರ್ನಾಟಕ ಲೋಕಸೇವಾ ಆಯೋಗ ಅಧ್ಯಕ್ಷ ಷಡಕ್ಷರಿ ಸ್ವಾಮಿ, ದಾವಣಗೆರೆ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಅವರು ಪತ್ನಿ ಸಮೇತ ಆಗಮಿಸಿ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಶುಭ ಕೋರಿದರು.

ಹರಿಹರ ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕ ಹೆಚ್.ಪಿ.ರಾಜೇಶ್, ತಹಶೀಲ್ದಾರ್ ಸಂತೋಷ್ ಕುಮಾರ್, ಡೂಡಾ ಆಯುಕ್ತ ಆದಪ್ಪ, ಪೋಲಿಸ್ ಇಲಾಖೆಯ ಡಿವೈಎಸ್ಪಿ ನಾಗರಾಜ್, ಸಿಪಿಐಗಳಾದ ಉಮೇಶ್, ಆನಂದ್, ಪಿಎಸ್‍ಐಗಳಾದ ವೀರಬಸಪ್ಪ, ಸತೀಶ್, ಇಮ್ರಾನ್, ನಿರ್ಮಿತಿ ಕೇಂದ್ರದ ರವಿ, ಶಿವಕುಮಾರ್, ಕೆಆರ್‍ಐಡಿಎಲ್‍ನ ಚಂದ್ರಶೇಖರ್, ಉಮೇಶ್ ಪಾಟೀಲ್, ನಿರಂಜನ್, ಪಾಲಿಕೆಯ ಉಪ ಆಯುಕ್ತ ರವೀಂದ್ರ ಮಲ್ಲಾಪುರ, ಡಿ.ಎಚ್.ಓ. ಡಾ. ತ್ರಿಪುಲಾಂಬ, ಸಿ.ಜಿ.ಆಸ್ಪತ್ರೆಯ ಅಧೀಕ್ಷಕಿ ಡಾ.ನೀಲಾಂಬಿಕೆ, ಬಾಪೂಜಿ ಆಸ್ಪತ್ರೆಯ ನಿರ್ದೇಶಕ ಡಾ. ಧನಂಜಯ, ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದ ಡಾ. ಕಾಳಪ್ಪನವರ್, ಡಾ. ಪ್ರಸಾದ್, ಡಾ. ಅರುಣಕುಮಾರ್, ಕೆ.ಇಮಾಂ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಎಲ್ಲಾ ಶಾಲಾ-ಕಾಲೇಜುಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರು ಆಗಮಿಸಿ ಶುಭಾಶಯ ತಿಳಿಸಿದರು. 

ತಂಜೀಮುಲ್ ಮುಸ್ಲಿಮಿನ್ ಕಮಿಟಿಯ ಅಧ್ಯಕ್ಷ ಸಾದೀಕ್ ಪೈಲ್ವಾನ್, ಮಾಜಿ ಅಧ್ಯಕ್ಷ ಸೈಯದ್ ಸೈಪುಲ್ಲಾ, ಸಾಯಿಬಾಬಾ ದೇವಸ್ಥಾನ ಸಮಿತಿಯವರು, ಮಡಿವಾಳ ಮಾಚಿದೇವ ಸಮಾಜದ ಅಧ್ಯಕ್ಷ ನಾಗೇಂದ್ರಪ್ಪ ಮತ್ತು ಪದಾಧಿಕಾರಿಗಳು, ಪೌರಕಾರ್ಮಿಕರ ಸಂಘದವರು, ವಿನೋಬ ನಗರ ಸಾರ್ವಜನಿಕ ಹಿತರಕ್ಷಣಾ ಸಮಿತಿಯವರು, ಆದಿ ಕರ್ನಾಟಕ ವಿದ್ಯಾಸಂಸ್ಥೆಯ ಪದಾಧಿಕಾರಿಗಳು, ಖಾಸಗಿ ಬಸ್ ಮಾಲಕರ ಸಂಘದ ಪದಾಧಿಕಾರಿಗಳು, ನಗರ ಬ್ಯಾಂಕ್‍ಗಳ ಒಕ್ಕೂಟದ ಪದಾಧಿಕಾರಿಗಳು, ನ್ಯಾಯಬೆಲೆ ಅಂಗಡಿಗಳ ಒಕ್ಕೂಟದ ಪದಾಧಿಕಾರಿಗಳು ಶುಭ ಕೋರಿದರು.

ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ಹರಪನಹಳ್ಳಿಯ ಎಂ.ಪಿ.ಲತಾ ಮಲ್ಲಿಕಾರ್ಜುನಯ್ಯ, ಅಂಜಿನಪ್ಪ, ಡಿ.ಅಬ್ದುಲ್ ರೆಹಮಾನ್, ಜನಪ್ರತಿನಿಧಿಗಳು, ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಶುಭಾಶಯ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News