ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ: ಎಸ್ಐಟಿ ತನಿಖೆಗೆ ವೀರಶೈವ ಮುಖಂಡರ ಒತ್ತಾಯ

Update: 2019-06-16 17:05 GMT

ಚಾಮರಾಜನಗರ, ಜೂ.16 : ಜಿಲ್ಲೆಯ ಗುಂಡ್ಲುಪೇಟೆ ಹೊರವಲಯದ ಕೆಬ್ಬೆಕಟ್ಟೆ ಶ್ರೀ ಶನೇಶ್ವರ ದೇವಾಲಯದಲ್ಲಿ ದಲಿತ ಯುವಕನ ಮೇಲೆ ಹಲ್ಲೆ ಹಾಗೂ ಬೆತ್ತಲೆ ಮೆರವಣಿಗೆ ಪ್ರಕರಣವನ್ನು ರಾಜ್ಯ ಸರ್ಕಾರವು ಎಸ್ಐಟಿ ಮೂಲಕ ತನಿಖೆಗೆ ಒಳಪಡಿಸುವಂತೆ ವೀರಶೈವ ಮುಖಂಡರು ಗುಂಡ್ಲುಪೇಟೆಯಲ್ಲಿ  ಆಗ್ರಹಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಗುಂಡ್ಲುಪೇಟೆ ಪಟ್ಟಣದ ಸೋಮೇಶ್ವರ ವಸತಿ ನಿಲಯದ ಆವರಣದಲ್ಲಿ ಸಭೆ ನಡೆಸಿದ ವೀರಶೈವ ಹಾಗೂ ಕುರುಬ ಜನಾಂಗದ ಮುಖಂಡರು, ಎಸ್ಐಟಿ ತನಿಖೆಯಿಂದ ಸತ್ಯ ಹೊರ ಬರಲಿದೆ ಎಂದು ಅಭಿಪ್ರಾಯಪಟ್ಟರು.

ಸಭೆಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಕಡಬೂರು ಮಂಜು, ಬೆತ್ತಲೆ ಮೆರವಣಿಗೆ ಮಾಡಿರುವುದು ಖಂಡನೀಯ. ಇದನ್ನು ನಾವು ಖಂಡಿಸುತ್ತೇವೆ. ಆದರೆ ಪ್ರಕರಣದ ಸತ್ಯ ಸತ್ಯತೆ ಕುರಿತು ಸೂಕ್ತ ತನಿಖೆ ಆಗಬೇಕು. ತನಿಖೆಯ ನಂತರ ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಕಠಿಣ ಶಿಕ್ಷೆ ಆಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಡಿದರು. ಬಳಿಕ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಎಚ್.ಎಸ್.ನಂಜಪ್ಪ ಮಾತನಾಡಿದರು.

ಈ ಸಂದರ್ಭ ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಮಾಜಿ ಜಿ.ಪಂ. ಸದಸ್ಯ ಕೊಡಸೋಗೆ ಶಿವಬಸಪ್ಪ, ಎಸ್.ಟಿ. ಮಹದೇವಸ್ವಾಮಿ, ಶಿವಮೂರ್ತಿ ಕಂದೆಗಾಲ, ಮಲ್ಲೇಶ್ ಮಾಡ್ರಹಳ್ಳಿ, ಮಾಡ್ರಹಳ್ಳಿ ಮಹದೇವಮ್ಮ, ನಾಗೇಂದ್ರ ಮಾಡ್ರಹಳ್ಳಿ, ಬಸವಣ್ಣ ಚೆನ್ನಮಲ್ಲಿಪುರ, ನಾಗೇಂದ್ರ ಪಾನು ಸೇರಿದಂತೆ ಅನೇಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News