ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಸಂಸತ್ ಪ್ರವೇಶಿಸಿದ ಪ್ರತಾಪ್ ಸಿಂಹ

Update: 2019-06-17 12:11 GMT

ಮಡಿಕೇರಿ, ಜೂ.17: ಎರಡನೇ ಬಾರಿಗೆ ಕೊಡಗು, ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಪ್ರತಾಪ್ ಸಿಂಹ ಅವರು ಇಂದು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಸಂಸತ್ ಪ್ರವೇಶಿಸುವ ಮೂಲಕ ಗಮನ ಸೆಳೆದರು.

17ನೇ ಲೋಕಸಭೆಯ ಮೊದಲ ಸಂಸತ್ ಅಧಿವೇಶನಕ್ಕೆ ಕೊಡವ ಉಡುಪಾದ ಕುಪ್ಯಚಾಲೆ, ದಟ್ಟಿ, ಪೀಚೆಕತ್ತಿಯೊಂದಿಗೆ ಲೋಕಸಭೆಯಲ್ಲಿ ಕಾಣಿಸಿಕೊಂಡು ಕೊಡಗಿನ ವೀರಪರಂಪರೆಯನ್ನು ಸಾಕ್ಷೀಕರಿಸಿದರು. ಅತ್ಯಧಿಕ ಮತಗಳನ್ನು ನೀಡಿ ತಮ್ಮ ಗೆಲುವಿಗೆ ಕಾರಣವಾದ ಕೊಡಗಿನ ಬಗ್ಗೆ ಅಪಾರ ಅಭಿಮಾನವನ್ನು ವ್ಯಕ್ತಪಡಿಸಿರುವ ಪ್ರತಾಪ್‍ ಸಿಂಹ, ಜಿಲ್ಲೆಯ ಜನರ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲವೆಂದು ಭರವಸೆ ನೀಡಿದ್ದಾರೆ.

ಮತ್ತೊಂದೆಡೆ ಯುವ ಸಂಸದರ ಪೈಕಿ ಒಬ್ಬರಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ತೇಜಸ್ವಿ ಸೂರ್ಯ ಮೈಸೂರು ಶೈಲಿಯ ಪಂಚೆ, ಶಲ್ಯ ಧರಿಸಿ ಸಂಸತ್ ಪ್ರವೇಶಿಸುವ ಮೂಲಕ ವಿಶಿಷ್ಟತೆ ಮೆರೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News