ಜನಪ್ರತಿನಿಧಿಗಳ ವಾಹನ ರಿಪೇರಿಗೆ 1.34 ಕೋಟಿ ಖರ್ಚು !

Update: 2019-06-18 14:45 GMT

ಬೆಂಗಳೂರು, ಜೂ.18: ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಯ ವಾಹನ ರಿಪೇರಿಗೆ ಬರೋಬ್ಬರಿ 1.34 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ.

ಉತ್ತರ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಭೀಮಪ್ಪ ಗಡಾದ ಸರಕಾರದಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಮಾಹಿತಿ ಅನ್ವಯ, ಮುಖ್ಯಮಂತ್ರಿ, ಸಚಿವರು ಹಾಗೂ ಸಿಬ್ಬಂದಿಗಳ ವಾಹಗಳ ರಿಪೇರಿಗೆ ಬರೋಬ್ಬರಿ ಒಟ್ಟು 1,34,64,197 ರೂ.ಗಳು ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಅವಧಿಯಲ್ಲಿ ಸಚಿವರ ಉಪಯೋಗಕ್ಕಾಗಿ 10 ಕ್ರಿಸ್ಟಾ, 8 ಇನೋವ ಮತ್ತು 8 ಫಾರ್ಚುನರ್ ಸೇರಿ 20 ಹೊಸ ವಾಹನಗಳನ್ನು ಖರೀದಿ ಮಾಡಲಾಗಿತ್ತು. ಅಲ್ಲದೆ, ಮುಖ್ಯಮಂತ್ರಿ ಕಚೇರಿಯ ಅಧಿಕಾರಿ, ಸಿಬ್ಬಂದಿಗಾಗಿ 20 ವಾಹನಗಳನ್ನು ಖರೀದಿ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.

ಸಚಿವ ಯು.ಟಿ.ಖಾದರ್ ವಾಹನ ರಿಪೇರಿಗೆ ಅತಿ ಹೆಚ್ಚು(5,80,233) ಖರ್ಚು ಮಾಡಿದ್ದರೆ, ರಮಾನಾಥ ರೈ 5,17,672 ರೂ.ಗಳನ್ನು ಖರ್ಚು ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News