ಪೊಲೀಸ್ ಹುದ್ದೆ ಬಿಟ್ಟರೆ ದಂಡ: ಮೊತ್ತ ಹೆಚ್ಚಿಸಿ ರಾಜ್ಯ ಸರಕಾರ ಆದೇಶ

Update: 2019-06-19 17:15 GMT

ಬೆಂಗಳೂರು, ಜೂ.19: ರಾಜ್ಯ ಪೊಲೀಸ್ ಇಲಾಖೆಯ ಹುದ್ದೆ ಬಿಟ್ಟು, ಇತರೆ ಇಲಾಖೆಗೆ ಸೇರ್ಪಡೆಗೊಂಡ ಸಿಬ್ಬಂದಿಗಳ ದಂಡದ ಮೊತ್ತ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.

ಇಲಾಖೆಯಲ್ಲಿ ತರಬೇತಿ ಪಡೆದ ನಂತರ, ಸೇವೆ ಸಲ್ಲಿಸದೆ, ಅನ್ಯ ಸೇವೆಗಳಿಗೆ ಹೋಗುವ ಪಿಎಸ್ಸೈ (ಸಿವಿಲ್-ಸಶಸ್ತ್ರ) ಅಭ್ಯರ್ಥಿಗಳ ಛಾಪಾ ಕಾಗದದ ಕರಾರು ಪತ್ರದ ಮೌಲ್ಯವನ್ನು 100 ರೂ.ಗಳಿಂದ 500 ರೂ.ಗಳಿಗೆ, ಅದೇ ರೀತಿ, ಮುಚ್ಚಳಿಕೆ ಪತ್ರದ ಮೊತ್ತವನ್ನು 50 ಸಾವಿರದಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.

ಪೊಲೀಸ್ ಪೇದೆಗಳ ಛಾಪಾ ಕಾಗದದ ಕರಾರು ಪತ್ರದ ಮೌಲ್ಯವನ್ನು 500 ರೂ.ಗಳಿಗೆ ಹಾಗೂ ಮುಚ್ಚಳಿಕೆ ಮೊತ್ತವನ್ನು 1 ಲಕ್ಷ ರೂ. ನಿಗದಿ ಮಾಡಲಾಗಿದೆ. ಆದರೆ, ಇಲಾಖೆ ಒಳಗಿನ ಇತರೆ ವೃಂದಗಳಿಗೆ ನೇಮಕಾತಿ ಹೊಂದಿದ ಸಿಬ್ಬಂದಿಗಳಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ. ತರಬೇತಿ ಪಡೆದು, ಇನ್ನಿತರ ಇಲಾಖೆಗಳಿಗೆ ನೇಮಕಾತಿ ಹೊಂದಿ, ಪೊಲೀಸ್ ಇಲಾಖೆ ಬಿಡಲು ತೀರ್ಮಾನಿಸಿದರೂ, ತರಬೇತಿಯ ಸಂಪೂರ್ಣ ವೆಚ್ಚವನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ವಸೂಲಿ ಮಾಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News