ಕೋರ್ಟ್‌ಗೆ ಹಾಜರಾದ ಶಾಸಕ ಸಿ.ಟಿ.ರವಿ

Update: 2019-06-19 17:51 GMT

ಬೆಂಗಳೂರು, ಜೂ.19: ಮರಳು ಪರ್ಮಿಟ್ ಕೊಡಿಸುವ ನೆಪದಲ್ಲಿ ಡಿಸಿ ಕಚೇರಿಗೆ ಹಾನಿ ಮಾಡಿದ ಪ್ರಕರಣದಲ್ಲಿ ಜಾರಿಯಾಗಿದ್ದ ಸಮನ್ಸ್ ರಿಕಾಲ್‌ಗಾಗಿ ಶಾಸಕ ಸಿ.ಟಿ.ರವಿ ಸೇರಿ ಇತರೆ ಆರೋಪಿಗಳು ಬುಧವಾರ ನಗರದ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅರ್ಜಿ ವಿಚಾರಣೆಯನ್ನು ಜು.6ಕ್ಕೆ ಮುಂದೂಡಲಾಗಿದೆ. 

ಸಿಟಿ ರವಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು, 2014ರಲ್ಲಿ ಚಿಕ್ಕಮಗಳೂರು ಡಿಸಿ ಕಚೇರಿ ಎದುರು ಮರಳು ಪರ್ಮಿಟ್ ಮಾಡಿ ಕೊಡಿ ಎಂದು ಕೆಲ ಕಾರ್ಯಕರ್ತರ ಜೊತೆ ಮುತ್ತಿಗೆ ಹಾಕಿದ್ದರು. ಈ ವೇಳೆ ಡಿಸಿ ಕಚೇರಿ ಹಾನಿಯಾದ ಹಿನ್ನೆಲೆ ಸರಕಾರದ ಬೊಕ್ಕಸಕ್ಕೆ ಹಾನಿ ಮಾಡಿದ್ದಾರೆಂದು ಚಿಕ್ಕಮಗಳೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹೀಗಾಗಿ, ನ್ಯಾಯಾಲಯ ಸಿ.ಟಿ.ರವಿಗೆ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಿ.ಟಿ.ರವಿ ಸಮನ್ಸ್ ರಿಕಾಲ್‌ಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಪೀಠವು ವಿಚಾರಣೆಯನ್ನು ಜು.6ಕ್ಕೆ ಮುಂದೂಡಿತು.

ಇನ್ನು ಸಿ.ಟಿ.ರವಿ ಮಾತನಾಡಿ, ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ಡಿಸಿ ಕಚೇರಿಯ 50 ರೂ.ಗಾಜು ಪುಡಿ ಪುಡಿಯಾಗಿದೆ. 2014ರಲ್ಲಿ ಈ ಘಟನೆ ನಡೆದಿದೆ. ಆದರೆ, ನಾಲ್ಕು ವರ್ಷದ ಬಳಿಕ ನನಗೆ ಸಮನ್ಸ್ ಬಂದಿದೆ. ಈ ಕೇಸ್‌ನಲ್ಲಿ ನಾವು ನಿಪರಾಧಿ ಎಂದು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News