ಏಕಾಗ್ರತೆ ಸಾಧಿಸಲು ಯೋಗ ಅತ್ಯವಶ್ಯಕ: ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ

Update: 2019-06-21 17:14 GMT

ಮಂಡ್ಯ, ಜೂ.21: ದೈಹಿಕ ಮತ್ತು ಮಾನಸಿಕ ಆರೋಗ್ಯ, ಮನಸ್ಸಿನ ಶುದ್ಧಿ ಹಾಗೂ ಏಕಾಗ್ರತೆ ಸಾಧಿಸಲು ಯೋಗ ಅತ್ಯವಶ್ಯವಾಗಿದೆ. ಚೈತನ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯಷ್ ಇಲಾಖೆ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐದನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದಿನನಿತ್ಯ ಯೋಗ ಮಾಡುವುದರಿಂದ ಮನಶಾಂತಿ ಏಕಗ್ರತೆ ಬರುತ್ತದೆ. ಮಾನಸಿಕ, ದೈಹಿಕ ಆರೋಗ್ಯವಾಗಿರಬಹುದು. ಯೋಗ ಆಚರಣೆಗಳು ಹೆಚ್ಚಾದರೆ ಆಸ್ಪತ್ರೆಗಳ ಅವಶ್ಯಕತೆ ಕಡಿಮೆಯಿರುತ್ತದೆ ಎಂದು ಅವರು ಹೇಳಿದರು.

ಆದಿಚುಂಚನಗಿರಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ವೇದ ಹಾಗೂ ಬ್ರಹ್ಮಶಾಸ್ತ್ರಗಳಲ್ಲಿ ಯೋಗವನ್ನು ಪ್ರತಿಪಾದಿಸಿದ್ದು, ಇಂದು ವಿಶ್ವದಾದ್ಯಂತ ಯೋಗ ಪಸರಿಸಿಕೊಂಡಿದೆ. ನಾವೆಲ್ಲರೂ ಯೋಗವನ್ನು ಕಲಿತು ಕ್ಷೇಮವಾಗಿರೋಣ ಎಂದರು.

ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಯೋಗಪಟುಗಳಾಗಿ ಭಾಗವಹಿಸಿದ್ದರು. ವಿವಿಧ ಯೋಗಾಸನಗಳು, ಧ್ಯಾನ ಹಾಗೂ ಪ್ರಾಣಾಯಾಮಗಳನ್ನು ಮಾಡಲಾಯಿತು. ಯೋಗ ಆಚರಣೆ ಮಾಡುವುದಾಗಿ ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಶಾಸಕ ಎಂ.ಶ್ರೀನಿವಾಸ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್, ದುದರ್ಂಡೇಶ್ವರ ಮಹಾಂತ ಶಿವಯೋಗಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಯೋಗಗುರು ಶಂಕರನಾರಾಯಣ ಶಾಸ್ತ್ರಿ, ಜಿಪಂ ಸಿಇಓ ಕೆ.ಯಾಲಕ್ಕಿಗೌಡ ಪಿಯು ಉಪ ನಿರ್ದೇಶಕಿ ಜಿ.ಆರ್.ಗೀತಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ, ನೆಹರು ಯು ಕೇಂದ್ರ ಸಮನ್ವಯ ಅಧಿಕಾರಿ ಎಸ್.ಸಿದ್ದರಾಮಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News