ಮನೆಯೊಳಗೆ ನುಗ್ಗಿದ ಚಿರತೆ: ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ಸೆರೆ

Update: 2019-06-22 16:18 GMT

ಹಾಸನ, ಜೂ.22: ಗ್ರಾಮದ ಮನೆಯೊಂದರ ಬಾತ್ ರೂಮ್ ಒಳಗೆ ನುಗ್ಗಿದ ಹೆಣ್ಣು ಚಿರತೆ ಕೆಲ ಗಂಟೆಗಳ ಕಾಲ ಗ್ರಾಮದ ಜನರಲ್ಲಿ ಭಯವನ್ನು ಹುಟ್ಟಿಸಿದ್ದು, ಕೊನೆಗೂ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ನಡೆಸಿ ಸೆರೆ ಹಿಡಿದಿದ್ದಾರೆ.

ತಾಲೂಕಿನ ಕೆ. ಬ್ಯಾಡರಹಳ್ಳಿ ಕಾವಲುನಲ್ಲಿರುವ ಶಿವಣ್ಣ ಎಂಬವರ ಮನೆಯ ಬಾತ್ ರೂಮ್ ಒಳಗೆ ನಾಲ್ಕು ವರ್ಷದ ಹೆಣ್ಣು ಚಿರತೆ ಅಡಗಿ ಕುಳಿತಿರುವುದನ್ನು ಗಮನಿಸಿದ ಮನೆ ಮಾಲಕರು, ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ಮುಟ್ಟಿಸಿದರು. ಬಳಿಕ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗಳು ಚಿರತೆಗಾಗಿ ಬಲೆಯನ್ನು ಅಳವಡಿಸಿ, ವನ್ಯಜೀವಿ ವೈದ್ಯರು, ಅಗ್ನಿಶಾಮಕ ದಳ ಸಿಬ್ಬಂದಿಗಳ ನೆರವಿನೊಂದಿಗೆ ಕಾರ್ಯಾಚರಣೆ ಕೈಗೊಂಡರು. ಸತತ ಒಂದು ಗಂಟೆಗಳ ಕಾರ್ಯಾಚರಣೆಯ ಬಳಿಕ ಚಿರತೆಯನ್ನು ಸೆರೆ ಮಾಡಲಾಯಿತು. 

ಅರವಳಿಕೆ ಮದ್ದನ್ನು ವನ್ಯಜೀವಿ ವೈದ್ಯ ಮುರುಳಿ ನೀಡಿದರು. ಸ್ಥಳಕ್ಕೆ ಅರಣ್ಯ ಇಲಾಖೆಯ ಡಿಎಫ್‍ಓ ಶಿವರಾಂಬಾಬು ಭೇಟಿ ನೀಡಿ ಪರಿಶೀಲಿಸಿ ವಿವರ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News