ಸಂಪರ್ಕ ರಸ್ತೆ ನಿರ್ಮಾಣಕ್ಕೆ ಕ್ರಮ: ಕೇಂದ್ರ ಸಚಿವ ಸುರೇಶ್ ಅಂಗಡಿ
ಬೆಳಗಾವಿ, ಜೂ.23: ಬೆಳಗಾವಿ ನಗರದ ಕಪಿಲೇಶ್ವರ ರಸ್ತೆ ಮೇಲ್ಸೇತುವೆ ಕೆಳಭಾಗದಲ್ಲಿರುವ ಬಡಾವಣೆಗಳಿಗೆ ರವಿವಾರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಭೇಟಿ ನೀಡಿ, ಸ್ಥಳೀಯರ ಸಮಸ್ಯೆಯನ್ನು ಆಲಿಸಿದರು.
ಮೇಲ್ಸೇತುವೆ ನಿರ್ಮಾಣದ ಸಂದರ್ಭದಲ್ಲಿ ರೈಲು ಹಳಿಗಳನ್ನು ದಾಟದಂತೆ ತಡೆಗೋಡೆ ಹಾಕಿರುವುದರಿಂದ ಇಲ್ಲಿನ ತಹಶೀಲ್ದಾರರಲ್ಲಿ, ಬಾಂದೂರಗಲ್ಲಿ, ತಾನಾಜಿಗಲ್ಲಿಯ ನಿವಾಸಿಗಳಿಗೆ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಬೇರೆ ಮಾರ್ಗದಿಂದ ಸುತ್ತುಹಾಕಿ ಸಂಚಾರ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ, ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದರು.
ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಈ ಭಾಗದಲ್ಲಿ ಸಂಚಾರಕ್ಕಾಗಿ ಶೀಘ್ರ ಅಂಡರ್‌ಗ್ರೌಂಡ್ ಪ್ಯಾಸೇಜ್ ನಿರ್ಮಾಣ ಮಾಡಲಾಗುವುದು. ಎರಡು ಬದಿಯಲ್ಲಿ ಲಿಪ್ಟ್‌ಗಳನ್ನು ಅಳವಡಿಸಲಾಗುವು ಎಂದು ಭರವಸೆ ನೀಡಿದರು. ನಂತರ ಕಪಿಲೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನೈಋತ್ಯ ರೈಲ್ವೆ ವಲಯದ ಜನರಲ್ ಮ್ಯಾೇಜರ್ ಎ.ಕೆ.ಸಿಂಗ್ ಉಪಸ್ಥಿತರಿದ್ದರು.