ಹನೂರು: ಪತ್ರಿಕಾ ವರದಿಗೆ ಸ್ಪಂದಿಸಿ ಟ್ರಾನ್ಸ್ ಫಾರ್ಮರ್ ಸಮಸ್ಯೆ ಪರಿಹರಿಸಿದ ಚೆಸ್ಕಾಂ

Update: 2019-06-23 17:38 GMT

ಹನೂರು, ಜೂ.23: ತಾಲೂಕಿನ ವೆಂಕಟಶೆಟ್ಟಿದೊಡ್ಡಿ ಗ್ರಾಮದ 100 ಕೆ.ವಿ ಟ್ರಾನ್ಸ್ ಫಾರ್ಮರ್ ಕಳೆದ ಎರಡು ತಿಂಗಳುಗಳ ಹಿಂದೆ ರಿಪೇರಿಯಾಗಿ ಲಕ್ಷಾಂತರ ರೂ. ಬೆಳೆ ಹಾನಿಯಾದ ಬಗ್ಗೆ ಪತ್ರಿಕೆಯು ಜೂ.20 ರಂದು ವರದಿ ಪ್ರಕಟಿಸಿದ್ದು, ವರದಿಗೆ ಸ್ಪಂದಿಸಿದ ಹನೂರು ಚೆಸ್ಕಾಂ ಇಲಾಖೆ ಟ್ರಾನ್ಸ್ ಫಾರ್ಮರ್ ಸಮಸ್ಯೆ ಪರಿಹರಿಸಿದೆ.

ಕಳೆದ ಜೂ.20 ರಂದು 'ಕೆಟ್ಟು ನಿಂತ ವಿದ್ಯುತ್ ಟ್ರಾನ್ಸ್ ಪಾರ್ಮರ್; ಲಕ್ಷಾಂತರ ರೂ. ಬೆಳೆ ನಾಶ' ಎಂಬ ಶಿರ್ಷಿಕೆಯಡಿ ಪತ್ರಿಕೆಯು ವರದಿ ಮಾಡಿತ್ತು. ವಾಣಿಜ್ಯ ಬೆಳೆಗಳಾದ ಬೆಳ್ಳುಳ್ಳಿ ಬಿತ್ತನೆಗೆ ಖರೀದಿ ಮಾಡಿ ದಾಸ್ತಾನು ಇರಿಸಿದ್ದು, ಚೀಲಗಳಲ್ಲಿಯೇ ಬೆಳ್ಳುಳ್ಳಿ ಮೊಳಕೆಯೊಡೆದಿತ್ತು. ವಿದ್ಯುತ್ ಟ್ರಾನ್ಸ್ ಪಾರ್ಮರ್ ರಿಪೇರಿಯಿಂದಾಗಿ, ನೀರಿನ ಲಭ್ಯತೆ ಇಲ್ಲದೆ, ಬಿತ್ತನೆ ಮಾಡದೆ ಮತ್ತಷ್ಟು ಹಣ ಪೋಲಾಗುವ ಮತ್ತು ರೈತರು ಸಾಲಗಾರರಾಗುವ ಸಾಧ್ಯತೆಗಳಿತ್ತು. ಈ ಬಗ್ಗೆ ಪತ್ರಿಕೆಯು ಮಾಡಿದ ವರದಿಗೆ ಸ್ಪಂದಿಸಿದ ಹನೂರು ಚೆಸ್ಕಾಂ ಇಲಾಖೆಯ ಎಇಇ ಶಂಕರ್, ಕಿರಿಯ ಅಭಿಯಂತರರಾದ ಭಾಸ್ಕರ್ ಹಾಗೂ ಸ್ಟೋರ್ ಇಂಜಿನಿಯರ್ ಗುರುಪ್ರಸಾದ್ ಟ್ರಾನ್ಸ್ ಫಾರ್ಮರ್ ಸಮಸ್ಯೆ ಪರಿಹರಿಸಿದ್ದಾರೆ. ಇವರಿಗೆ ರೈತರು ಅಭಿನಂದನೆ ಸಲ್ಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News